Connect with us

ಮಂಗಳಮುಖಿ ವೇಷ ಧರಸಿ ಭಿಕ್ಷೆ ಬೇಡ್ತಿದ್ದ ಯುವಕನಿಗೆ ಅಸಲಿ ಮಂಗಳಮುಖಿಯರಿಂದ ಧರ್ಮದೇಟು

ಮಂಗಳಮುಖಿ ವೇಷ ಧರಸಿ ಭಿಕ್ಷೆ ಬೇಡ್ತಿದ್ದ ಯುವಕನಿಗೆ ಅಸಲಿ ಮಂಗಳಮುಖಿಯರಿಂದ ಧರ್ಮದೇಟು

ದಾವಣಗೆರೆ: ತಾನು ಮಂಗಳಮುಖಿ ಎಂದು ಜನರಿಗೆ ನಂಬಿಸುತ್ತಾ ಭಿಕ್ಷೆ ಬೇಡುತ್ತಿದ್ದ ಯುವಕನನ್ನು ಅಸಲಿ ಮಂಗಳಮುಖಿಯರು ಹಿಡಿದು ಥಳಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ನಗರದ ಗಡಿಯಾರ ಕಂಬದ ಹತ್ತಿರ ಕಳೆದ ಹಲವು ದಿನಗಳಿಂದ ರಾಜಶೇಖರ್ ಅಲಿಯಾಸ್ ಕಾವ್ಯ ಎನ್ನುವ ಯುವಕ ಮಂಗಳಮುಖಿಯ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣವನ್ನು ವಸೂಲಿ ಮಾಡುತ್ತಿದ್ದ. ಹೀಗೆ ಹಣ ವಸೂಲಿ ಮಾಡುತ್ತಿರುವುದನ್ನ ಅಸಲಿ ಮಂಗಳಮುಖಿಯರಾದ ಆಲಿಯಾ ಹಾಗೂ ಜೋಯಾ ಎನ್ನುವವರು ನೋಡಿದ್ದಾರೆ. ಇಂದು ಯುವಕನನ್ನು ಹಿಡಿದು ಬಟ್ಟೆ ಬಿಚ್ಚಿಸಿ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ.

ಯುವಕನಾಗಿ ದುಡಿದು ತಿನ್ನುವ ಬದಲು ಮಂಗಳಮುಖಿಯಾಗಿ ನಾಟಕವಾಡುತ್ತಿದ್ದಾನೆ. ಇಂತವರಿಂದ ನಮಗೆ ಬೆಲೆ ಇಲ್ಲದಂತಾಗಿದೆ ಎಂದು ಮಂಗಳಮುಖಿಯರು ಆಕ್ರೋಶ ವ್ಯಕ್ತಪಡಿಸಿ ನಕಲಿ ಮಂಗಳಮುಖಿಗೆ ಬಟ್ಟೆ ಬಿಚ್ಚಿಸಿ ಬಸವನಗರ  ಪೊಲೀಸರಿಗೆ ಒಪ್ಪಿಸಿದ್ದಾರೆ.

 

 

Advertisement
Advertisement