ಚಿಕ್ಕಬಳ್ಳಾಪುರ: ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ ಸೇರಿದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿಯಲ್ಲಿ (Chintamani) ನಡೆದಿದೆ.
ಚಿಂತಾಮಣಿ ತಾಲೂಕಿನ ಬುಡಗವಾರಹಳ್ಳಿ ಬಳಿಯ ಮದ್ಯವ್ಯಸನ ಮುಕ್ತ ಹಾಗೂ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸಪುರದ ಮಂಜುನಾಥ್ (21) ಮೃತ ಯುವಕ.
Advertisement
Advertisement
ಗಾಂಜಾ ವ್ಯಸನಿಯಾಗಿದ್ದ ಮಂಜುನಾಥ್ನನ್ನು ಮದ್ಯವ್ಯಸನ ಕೇಂದ್ರಕ್ಕೆ ಸೇರಿಸಿ ಕೇವಲ 5 ದಿನಗಳಾಗಿತ್ತು. ಆದರೆ ಯುವಕನ ಹಠಾತ್ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ. ಇದನ್ನೂ ಓದಿ: ಕದ್ದು ತಂದಿದ್ದ ಜೆಸಿಬಿ ಬಳಸಿ ATM ಕಳ್ಳತನಕ್ಕೆ ಯತ್ನ
Advertisement
Advertisement
ಯುವಕನ ಮೃತದೇಹದ ಮೇಲೆ ಹಲ್ಲೆ ಮಾಡಿರುವ ಗುರುತುಗಳು ಇವೆ ಎನ್ನಲಾಗಿದ್ದು, ಇದು ಕೊಲೆ ಎಂದು ಮೃತನ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ ಸರಿ ಮಾಡ್ತೀನಿ ಅಂತ ಬಂದ ಜ್ಯೋತಿಷಿ – ಚಿನ್ನ, ಹಣ ದೋಚಿ ಬೀರುವಿನಲ್ಲಿ ನಿಂಬೆಹಣ್ಣು ಇಟ್ಟು ಹೋದ
Web Stories