Tuesday, 17th July 2018

Recent News

ಮೈಸೂರಿನಲ್ಲಿ ಜಿಟಿಜಿಟಿ ಮಳೆ ನಡುವೆ ಯುವಕರ ಟ್ರೀಣ್ ಟ್ರೀಣ್ ಸೈಕಲ್ ಸಾವರಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಹಿನ್ನೆಲೆಯಲ್ಲಿ ಇಂದು ಯುವಕರು ಟ್ರೀಣ್ ಟ್ರೀಣ್ ಸೈಕಲ್ ಏರಿ ಮೈಸೂರಿನ ಇತಿಹಾಸದ ಬಗ್ಗೆ ಹಾಗೂ ಮಹತ್ವದ ಬಗ್ಗೆ ಪರಿಚಯ ಮಾಡಿಕೊಂಡರು.

ಮೈಸೂರಿನ ದಿವಾನ್ ರಂಗರ್ಚಾಲು ಪುರಭವನದ ಮುಂದೆ ಜಿಲ್ಲಾಧಿಕಾರಿ ರಂದೀಪ್ ಈ ಟ್ರೀಣ್ ಟ್ರೀಣ್ ಸೈಕಲ್ ಸವಾರಿಗೆ ಚಾಲನೆ ನೀಡಿದ್ದರು. ಮಂಜಿನ ಹಾಗೆ ಬೀಳುತ್ತಿದ್ದ ಮಳೆಯ ಪುಟ್ಟ ಪುಟ್ಟ ಹನಿಗಳು ಒಂದು ಕಡೆಯಾದ್ರೆ ಮತ್ತೊಂದೆಡೆ ಯುವಕರು ಸೈಕಲ್ ಏರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ರಂದೀಪ್ ಹಾಗು ಮೇಯರ್ ರವಿಕುಮಾರ್ ಯುವಕರೊಂದಿಗೆ ಸೈಕಲ್ ಸವಾರಿ ನಡೆಸಿದ್ದು ವಿಶೇಷವಾಗಿತ್ತು.

Leave a Reply

Your email address will not be published. Required fields are marked *