Advertisements

ವಿದ್ಯುತ್ ಕೇಬಲ್‍ಗೆ ಸಿಲುಕಿ 15 ನಿಮಿಷ ಕಂಬದಲ್ಲೇ ಒದ್ದಾಡಿದ ಯುವಕ

ತುಮಕೂರು: ವಿದ್ಯುತ್ ಕೇಬಲ್ ರಿಪೇರಿ ಮಾಡಲು ತೆರಳಿದ್ದ ಗುತ್ತಿಗೆ ಕಾರ್ಮಿಕ ವಿದ್ಯುತ್ ಕೇಬಲ್ ನಡುವೆ ಸಿಲುಕಿ ಒದ್ದಾಟ ನಡೆಸಿದ ಘಟನೆ ನಗರದ ಶಿರಾ ಗೇಟ್ ಬಳಿ ನಡೆದಿದೆ.

Advertisements

ಸೋಯಬ್ (25) ವಿದ್ಯುತ್ ತಂತಿಗೆ ಸಿಲುಕಿ ಒದ್ದಾಡಿದ ಯುವಕ. ನಗರದಲ್ಲಿ ವಿದ್ಯುತ್ ತಂತಿ ಬದಲಾಗಿ ಕೇಬಲ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಸರ್ಕಾರದಿಂದ ಕಾಮಗಾರಿ ಗುತ್ತಿಗೆ ಪಡೆದಿದ್ದ ವ್ಯಕ್ತಿ ಕಾರ್ಮಿಕರೊಂದಿಗೆ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಕೇಬಲ್ ಅಳವಡಿಸಲು ಯುವಕನನ್ನು ವಿದ್ಯುತ್ ಕಂಬಕ್ಕೆ ಹತ್ತಿಸಿಲಾಗಿತ್ತು. ಈ ವೇಳೆ ಯುವಕನ ಕಾಲು ಜಾರಿ ಕೇಬಲ್ ನಡುವೆಯೇ ಸಿಕ್ಕಿಬಿದಿದ್ದ.

Advertisements

ಕಂಬ ಏರಲು ತಂದಿದ್ದ ವಾಹನ ಬೇರೆ ಸ್ಥಳಕ್ಕೆ ತೆರಳಿದ ಕಾರಣ ಯುವಕ ಕೇಬಲ್ ನಡುವೆ ಸಿಕ್ಕಿ ನರಳುತ್ತಿದ್ರು ಸಹಾಯ ಮಾಡಲಾಗದೆ ಇತರೇ ಸ್ಥಳದಲ್ಲಿದ್ದ ಕಾರ್ಮಿಕರು ದಿಕ್ಕು ತೋಚದಾಗಿದ್ದರು. ಪರಿಣಾಮ ಸುಮಾರು 15 ನಿಮಿಷಗಳ ಕಾಲ ಯುವಕ ವಿದ್ಯುತ್ ಕಂಬದಲ್ಲೇ ಒದ್ದಾಟ ನಡೆಸಿದ್ದ. ಆ ಬಳಿಕ ಘಟನೆ ಸ್ಥಳಕ್ಕೆ ಜೆಸಿಪಿ ತರಿಸಿ ಆದರ ಮೂಲಕ ಯುವಕನನ್ನು ರಕ್ಷಣೆ ಮಾಡಿದರು.

ಹೆಚ್ಚು ಸಮಯ ವಿದ್ಯುತ್ ಕಂಬದಲ್ಲೇ ಸಿಲುಕಿ ಒದ್ದಾಟ ನಡೆಸಿದ್ದ ಕಾರಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Advertisements
Exit mobile version