ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಆಜಾನ್ ಕೇಳಿದ್ದರಿಂದ ಯುವಕರು ಮೆರವಣಿಗೆಯನ್ನು ನಿಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಂಶಸೆಗೆ ಕಾರಣವಾಗಿದೆ.
ಹೌದು, ಸಂಗಾಪೂರದ ವಿನಾಯಕ ಗೆಳೆಯರ ಬಳಗದ ಯುವಕರು ಅದ್ಧೂರಿಯಾಗಿ ಬುಧವಾರ ಗಣೇಶ ವಿಸರ್ಜನೆ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮೆರವಣಿಗೆ ಸಾಗುತ್ತಿರುವಾಗ ಹತ್ತಿರದ ಮಸೀದಿಯಿಂದ ಆಜಾನ್ ಕೇಳಿಬಂದಿದೆ. ಆಜಾನ್ ಕೇಳಿದ ಕೂಡಲೇ ಯುವಕರು ಮೆರವಣಿಗೆಯನ್ನು ಸ್ವಲ್ಪ ಸಮಯದ ಕಾಲ ನಿಲ್ಲಿಸಿ ಬಳಿಕ ಮುಂದುವರಿಸಿದ್ದರು.
ಯುವಕರು ಆಜಾನ್ ವೇಳೆ ಮೆರವಣಿಗೆಯನ್ನು ನಿಲ್ಲಿಸಿ ಗೌರವ ಸೂಚಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ವಿನಾಯಕ ಗೆಳೆಯರ ಬಳಗದ ಯುವಕರ ತಂಡಕ್ಕೆ ಜಾಲತಾಣಿಗರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಣೇಶ ಹಬ್ಬವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ ಎಂಬುದನ್ನು ಯುವಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೀಗೆ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಫೇಸ್ಬುಕ್‍ಗಳಲ್ಲಿ ಹಂಚಿಕೊಂಡಿದ್ದಾರೆ.
https://www.youtube.com/watch?v=KSo13tmCOgU
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv