ಗುರಾಯಿಸಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಕೊಂದ್ರು!

Public TV
1 Min Read
BAR MURDER

ಬೆಂಗಳೂರು: ಗುರಾಯಿಸಿದ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ನಗರದ ಮುದ್ದಿನಪಾಳ್ಯದಲ್ಲಿ ನಡೆದಿದೆ.

ಮಲ್ಲತ್ತಹಳ್ಳಿ ನಿವಾಸಿ ಅರುಣ್(22) ಕೊಲೆಯಾದ ದುರ್ದೈವಿ. ಶನಿವಾರ ರಾತ್ರಿ ಮುದ್ದಿನಪಾಳ್ಯದ ಮಾರುತಿ ಬಾರಿಗೆ ಅರುಣ್ ಸ್ನೇಹಿತರ ಜೊತೆ ಮದ್ಯ ಖರೀದಿಸಲು ತೆರಳಿದ್ದನು. ಈ ವೇಳೆ ಬಾರಿನಲ್ಲಿದ್ದ ಮೂವರು ಯಾಕೋ ಗುರಾಯಿಸುತ್ತಿದ್ದೀಯ ಎಂದು ಗಲಾಟೆ ಶುರು ಮಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಅರುಣ್‍ಗೆ ಚಾಕುವಿನಿಂದ ಇರಿದಿದ್ದಾರೆ.

BAR MURDER 1

ಅರುಣ್ ಜೊತೆಯಲ್ಲಿದ್ದ ಕಿಶನ್ ಎಂಬಾತನಿಗೂ ಚಾಕುವಿನಿಂದ ಇರಿದಿದ್ದಾರೆ. ತಕ್ಷಣವೇ ಅಲ್ಲಿದ್ದವರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅರುಣ್ ಎದೆ ಭಾಗಕ್ಕೆ ತೀವ್ರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯಕ್ಕೆ ಕಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಘಟನೆ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

BAR MURDER 2

Share This Article
Leave a Comment

Leave a Reply

Your email address will not be published. Required fields are marked *