ಬಳ್ಳಾರಿ: ಪಕ್ಕದ ಮನೆ ಉಪನ್ಯಾಸಕಿ ತನ್ನ ಅಕ್ರಮ ಸಂಬಂಧವನ್ನು ಸ್ನೇಹಿತನ ಬಳಿ ಬಯಲು ಮಾಡಿದ್ದಕ್ಕೆ ಸಿಟ್ಟಾಗಿ ಆಕೆಗೆ ಚಾಕು ಇರಿದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಶಾಂತ್ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಸ್ನೇಹಿತ ಮನೆಯಲ್ಲಿ ಇಲ್ಲದ ವೇಳೆ ಮನೆಗೆಲ್ಲಾ ಹೋಗಿ ಬರುತ್ತಿದ್ದ. ಈ ವಿಚಾರವನ್ನು ಪಕ್ಕದ ಮನೆಯಲ್ಲಿದ್ದ ಉಪನ್ಯಾಸಕಿ ಸುಧಾರಾಣಿಯೇ ತನ್ನ ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತನಿಗೆ ಚಾಡಿ ಹೇಳಿದ್ದಾಳೆ ಎಂದು ರೊಚ್ಚಿಗೆದ್ದು ಉಪನ್ಯಾಸಕಿಗೆ ಚಾಕು ಇರಿದಿದ್ದಾನೆ.
ಗುಡೇಕೋಟೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸುಧಾರಾಣಿ ಮಂಗಳವಾರ ಸಂಜೆ ಕಾಲೇಜು ಮುಗಿಸಿ ಮನೆಗೆ ತೆರಳುವ ವೇಳೆ ಪ್ರಶಾಂತ್ ದಾಳಿ ಮಾಡಿ ಚಾಕು ಇರಿದಿದ್ದಾನೆ. ಘಟನೆಯನ್ನು ನೋಡಿದ ಸ್ಥಳೀಯರು ಪ್ರಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದ ಉಪನ್ಯಾಸಕಿಯನ್ನು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ದಾಖಲಿಸಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿರುವ ಗುಡೇಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv