ಮಂಡ್ಯ: ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದ ರಮೇಶ್‍ಬಾಬು ಬಂಡಿಸಿದ್ದೇಗೌಡ ಪರ ಮತ ಕೇಳಲು ಬಂದ ಅವರ ಸಹೋದರ ಹರ್ಷ ಬಂಡಿಸಿದ್ದೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದಲ್ಲಿ ಹರ್ಷ ಬಂಡಿಸಿದ್ದೇಗೌಡ ಅವರಿಗೆ, ದೇವೇಗೌಡರ ಮನೆಯವರು ನಿಮಗೆ ಏನು ಅನ್ಯಾಯ ಮಾಡಿದ್ದರು ಎಂದು ಯುವಕರು ಪ್ರಶ್ನೆ ಕೇಳುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ದೂರು
Advertisement
ಜೆಡಿಎಸ್ ಪಕ್ಷದಿಂದ ಸತತ ಎರಡು ಬಾರಿ ಗೆದ್ದು ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ರಮೇಶ್‍ಬಾಬು ಬಂಡಿಸಿದ್ದೇಗೌಡ ಚುನಾವಣೆಗೆ ಕೆಲವೇ ದಿನಗಳಿರುವಂತೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ರಮೇಶ್‍ಬಾಬು ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
Advertisement
Advertisement
ಹೀಗಾಗಿ ರಮೇಶ್‍ಬಾಬು ಬಂಡಿಸಿದ್ದೇಗೌಡ ಪರ ಮತ ಕೇಳಲು ಅವರ ಸಹೋದರ ಹರ್ಷ ಬಂಡಿಸಿದ್ದೇಗೌಡ ಮೇಳಾಪುರ ಗ್ರಾಮಕ್ಕೆ ಹೋಗಿದ್ದಾರೆ. ಆದರೆ ಕಳೆದ ಬಾರಿ ರಮೇಶ್‍ಬಾಬು ಬಂಡಿಸಿದ್ದೇಗೌಡ ಪರ ಕೆಲಸ ಮಾಡಿದ್ದ ಯುವಕರು, ಸಹೋದರನ ಪರ ಮತ ಕೇಳಲು ಬಂದ ಹರ್ಷ ಬಂಡಿಸಿದ್ದೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!
Advertisement
ದೇವೇಗೌಡರ ಮನೆಯವರು ಏನ್ ಅನ್ಯಾಯ ಮಾಡಿದ್ರು ನಿಮಗೆ. ನಾವು ಹಿಂದಿನಿಂದಲೂ ಪಕ್ಕಾ ಜೆಡಿಎಸ್. ಕಳೆದ ಬಾರಿ ಬಾಬಣ್ಣನಿಗೆ ಓಟ್ ಹಾಕಿದ್ದೇವೆ. ಈ ಸಲ ನಮ್ಮ ಪಕ್ಷ ಬಿಟ್ಟು ಹೋಗಲು ಏನು ಕಾರಣ. ಏನು ಅನ್ಯಾಯ ಮಾಡಿದ್ರು ನಮ್ಮ ದೇವೇಗೌಡ್ರು ಎಂದು ಯುವಕರು ಕಿಡಿಕಾರಿದ್ದಾರೆ.
ಯುವಕರ ಮಾತಿಗೆ ಹರ್ಷ ಬಂಡಿಸಿದ್ದೇಗೌಡ ಉತ್ತರ ನೀಡಿದ್ದು, ದೇವೇಗೌಡರ ಮನೆಯವರ ತಾತ್ಸಾರ ಮನೋಭಾವ, ಚುಚ್ಚು ನುಡಿಗಳು ಪಕ್ಷ ಬಿಡಲು ಕಾರಣ ಎಂದಿದ್ದಾರೆ. ಆದರೆ ಅವರ ಮಾತನ್ನು ಒಪ್ಪದ ಯುವಕರು ದೇವೇಗೌಡರು, ಕುಮಾರಸ್ವಾಮಿ ಪರ ಜೈಕಾರ ಕೂಗುತ್ತಾ ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ವಿಧಿಯಿಲ್ಲದೆ ಮತವನ್ನು ಕೂಡ ಕೇಳದೆ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ಸಹೋದರ ಹರ್ಷ ಬಂಡಿಸಿದ್ದೇಗೌಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.