ಬೆಂಗಳೂರು: ಜಿಮ್ ಮಾಡುವವರಿಗೆ ಅಪ್ಪು ಸಾವು ಬಿಗ್ ಶಾಕ್ ನೀಡಿದ್ದು, ಮಕ್ಕಳಿಗೆ ಜಿಮ್ ಹೋಗದಂತೆ ಪೋಷಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಜಿಮ್ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
Advertisement
ಕಳೆದ 9 ದಿನಗಳಿಂದ ಜಿಮ್ ಕಡೆಗೆ ಯುವಕರು ಹೆಚ್ಚಾಗಿ ಬರುತ್ತಿಲ್ಲ. ಮೊದಲೆರಡು ದಿನ ಜಿಮ್ ಬಂದ್ ಮಾಡಲಾಗಿತ್ತು. ಈಗ ಜಿಮ್‍ಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ನಿತ್ಯ 350 ಮಂದಿ ಜಿಮ್ ಮಾಡುತ್ತಿದ್ದರು. ಆದರೀಗ 40 ರಿಂದ 50 ಮಂದಿ ಯುವಕ, ಯುವತಿಯರು ಬಂದು ವ್ಯಾಯಾಮ ಮಾಡುತ್ತಿದ್ದಾರೆ.
Advertisement
Advertisement
ಈ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಮ್ ಮಾಲೀಕರೊಬ್ಬರು, ಕಳೆದ 2 ವರ್ಷಗಳ ಹಿಂದೆ ಕೊರೊನಾದಿಂದ ಜನ ಜಿಮ್‍ಗೆ ಬರುತ್ತಿರಲಿಲ್ಲ. ಇದೀಗ ಕೊರೊನಾ ಕಡಿಮೆ ಆಗಿ ಜನ ಜಿಮ್‍ನತ್ತ ಮುಖ ಮಾಡಿದ್ದರು. ಆದರೆ ಅಪ್ಪು ಅವರ ಸಾವಿನ ನಂತರ ತುಂಬಾ ಜನ ಜಿಮ್‍ಗೆ ಬರುವುದನ್ನು ಬಿಟ್ಟಿದ್ದಾರೆ ಎಂದರು. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು’
Advertisement
ಭಾರ ಎತ್ತುವುದರಿಂದ ಕಾರ್ಡಿಯಾಕ್ ಅಟ್ಯಾಕ್ ಆಗುತ್ತದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಇದು ಸತ್ಯವಲ್ಲ ಎಂಬುವುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಹಾಗಾಗಿ ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ