Connect with us

ಚಲಾಯಿಸು ನೋಡೋಣ ಎಂದಿದ್ದಕ್ಕೆ ಸ್ನೇಹಿತನ ಮೇಲೆ ಲಾರಿ ಹರಿಸಿ ಕೊಂದೇ ಬಿಟ್ಟ!

ಚಲಾಯಿಸು ನೋಡೋಣ ಎಂದಿದ್ದಕ್ಕೆ ಸ್ನೇಹಿತನ ಮೇಲೆ ಲಾರಿ ಹರಿಸಿ ಕೊಂದೇ ಬಿಟ್ಟ!

ಮಂಡ್ಯ: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಗೆಳೆಯನ ಮೇಲೆ ಲಾರಿ ಹರಿಸಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ನಡೆದಿದೆ.

ತಮಿಳುನಾಡು ಮೂಲದ 23 ವರ್ಷದ ರಾಜನ್ ಕೊಲೆಯಾದ ದುರ್ದೈವಿ. ಕಿಕ್ಕೇರಿ ಗ್ರಾಮದಲ್ಲಿ ತೆಂಗಿನ ಸಿಪ್ಪೆಯ ನಾರನ್ನು ತೆಗೆಯುವ ಕಾರ್ಖಾನೆಯಲ್ಲಿ ಮುರಳಿ ಮತ್ತು ರಾಜನ್ ಕೆಲಸ ಮಾಡುತ್ತಿದ್ದರು. ಇಬ್ಬರು ಗೆಳೆಯರಾಗಿದ್ದು, ಕುಡಿದ ಮತ್ತಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ.

ಈ ವೇಳೆ ಮುರಳಿ ತನ್ನ ಗೆಳೆಯ ರಾಜನ್ ಮೇಲೆ ಲಾರಿ ಹರಿಸೋದಾಗಿ ಬೆದರಿಸಿದ್ದಾನೆ. ಗೆಳೆಯ ತಮಾಷೆಗೆ ಹೇಳುತ್ತಿರಬಹುದೆಂದು ರಾಜನ್ ಧೈರ್ಯವಾಗಿ ಲಾರಿ ಹರಿಸು ನೋಡೋಣ ಎಂದಿದ್ದಾನೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಮುರಳಿ ರೋಷದಿಂದ ರಾಜನ್ ಮೇಲೆ ಲಾರಿ ಹರಿಸಿ ಕೊಂದಿದ್ದಾನೆ.

ಈ ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುರಳಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement