ಚಿಕ್ಕಬಳ್ಳಾಪುರ: ನಂದಿಬೆಟ್ಟದಿಂದ ಮರಳುತಿದ್ದ ಯುವಕ, ಯುವತಿಯನ್ನು ಅಡ್ಡಗಟ್ಟಿ ಯುವಕರು ಸುಲಿಗೆ ಮಾಡಿರುವ ಘಟನೆ ದೇವನಹಳ್ಳಿ ತಾಲೂಕು ತಿಂಡ್ಲು ಸರ್ಕಲ್‍ನಲ್ಲಿ ನಡೆದಿದೆ.
Advertisement
ವೀಕೆಂಡ್ ಎಂದು ಕಳೆದ ಶನಿವಾರ ಬೆಂಗಳೂರಿನ ಅತುಲ್ ಕತ್ರಿ ಎನ್ನುವವರು ತನ್ನ ಸ್ನೇಹಿತೆ ದಿವ್ಯಾ ಜೊತೆ ವಿಶ್ವವಿಖ್ಯಾತ ನಂದಿಗಿರಿಧಾಮದತ್ತ ಬಂದಿದ್ದಾರೆ. ಈ ವೇಳೆ ನಂದಿಬೆಟ್ಟ ಬಂದ್ ಆಗಿರುವ ವಿಚಾರ ಗೊತ್ತಾಗಿದೆ.ಇದನ್ನೂ ಓದಿ:ಸರ್ಕಾರದಿಂದ ಆದೇಶ ಹೊರಡಿಸಿ ಪುಣ್ಯ ಕಟ್ಟಿಕೊಳ್ಳಿ- ಮಾಜಿ ಸ್ಪೀಕರ್ ವಿರುದ್ಧ ಪೊಲೀಸರ ಆಕ್ರೋಶ
Advertisement
ಗಿರಿಧಾಮ ಬಂದ್ ಆಗಿದ್ದನ್ನು ತಿಳಿದು ಮತ್ತೆ ನಂದಿಬೆಟ್ಟ ಚಪ್ಪರಕಲ್ಲು ಐವಿಸಿ ರೋಡ್ ತಿಂಡ್ಲು ಸರ್ಕಲ್ ಮಾರ್ಗವಾಗಿ ಯಲಹಂಕದ ಕಡೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಆದರೆ ದೇವನಹಳ್ಳಿ ತಾಲೂಕು ತಿಂಡ್ಲು ಸರ್ಕಲ್ ಬಳಿ ಡಿಯೋ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಇವರ ಬೈಕನ್ನು ಅಡ್ಡಗಟ್ಟಿದ್ದಾರೆ.ಇದನ್ನೂ ಓದಿ:ಗಣೇಶೋತ್ಸವಕ್ಕೆ ಅವಕಾಶ ನೀಡದೇ ಇದ್ದರೆ ಚುನಾವಣೆ ಬಹಿಷ್ಕಾರ: ಶ್ರೀರಾಮ ಸೇನೆ
Advertisement
Advertisement
ಆ ಯುವಕರು ಅತುಲ್ ಮತ್ತು ದಿವ್ಯಾಗೆ ಚಾಕು ತೋರಿಸಿ ಬೆದರಿಸಿ ಹಣ ಕೇಳಿದ್ದಾರೆ. ಹಣ ಇಲ್ಲ ಎಂದಾಗ ದುಡ್ಡಿಲ್ಲದೆ ಶೋಕಿ ಮಾಡೋಕೆ ಬರ್ತೀರಾ ಎಂದು ಬೈದು ದಿವ್ಯಾ ಬಳಿಯಿದ್ದ ಪರ್ಸ್, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಅತುಲ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿದ್ದಾರೆ.ಇದನ್ನೂ ಓದಿ:ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ: ಗೋವಿಂದ ಕಾರಜೋಳ
ಅತುಲ್ ಕತ್ರಿ ಮೂಲತಃ ಚತ್ತೀಸ್‍ಘಡದವರಾಗಿದ್ದು, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಎಂ.ಎಸ್ ಪಾಳ್ಯದಲ್ಲಿ ವಾಸವಾಗಿದ್ದಾರೆ.