ಬೆಂಗಳೂರು: ತಡರಾತ್ರಿ ಫೋನ್ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಯುವಕನಿಗೆ ಮಹಿಳೆ ಮತ್ತು ಆಕೆಯ ಪತ್ನಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪೀಣ್ಯದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು 22 ವರ್ಷದ ಶ್ರೀಮಂತ್ ಎಂದು ಗುರುತಿಸಲಾಗಿದ್ದು, ಈಗ ಪೀಣ್ಯ ಪೊಲೀಸರ ವಶದಲ್ಲಿದ್ದಾನೆ.
Advertisement
ಏನಿದು ಪ್ರಕರಣ?: ಪೀಣ್ಯ ನಿವಾಸಿಯಾಗಿರುವ ಮಹಿಳೆಯೋರ್ವರು ತನ್ನ ಗೆಳತಿಗೆ ಕರೆ ಮಾಡುವ ವೇಳೆ ನಂಬರ್ ಮಿಸ್ ಆಗಿ ಶ್ರೀಮಂತ್ ಎಂಬಾತನಿಗೆ ಕರೆ ಮಾಡಿದ್ದರು. ಈ ವೇಳೆ ಶ್ರೀಮಂತ್ ಕರೆ ಸ್ವೀಕರಿಸಿ ಮಾತನಾಡಿರಲಿಲ್ಲ. ಬಳಿಕ ರಾತ್ರಿ ಮಹಿಳೆಗೆ ಕರೆ ಮಾಡಿದ್ದ. ಈ ವೇಳೆ ಮಹಿಳೆ `ಕ್ಷಮಿಸಿ ರಾಂಗ್ ನಂಬರ್ ಗೆ ಡಯಲ್ ಆಗಿತ್ತು’ ಎಂದು ಸಂಭಾಷಣೆ ವೇಳೆ ತಿಳಿಸಿದ್ದರು. ಆದ್ರೆ ನಂತರ ಶ್ರೀಮಂತ್ ಮಹಿಳೆಗೆ ತಡರಾತ್ರಿ ಕರೆ ಮಾಡುತ್ತಿದ್ದ. ಬರೋಬ್ಬರಿ ನೂರಕ್ಕೂ ಹೆಚ್ಚು ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದ. ಅಷ್ಟೇ ಅಲ್ಲದೇ ದೈಹಿಕ ಸಂಪರ್ಕಕ್ಕೆ ಬೇಡಿಕೆ ಇಟ್ಟಿದ್ದ. ಆತನನ್ನು ಅವಾಯ್ಡ್ ಮಾಡಲು ಹೋದಾಗ ಶ್ರೀಮಂತ್ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ.
Advertisement
Advertisement
ಇಷ್ಟೆಲ್ಲಾ ಆದರೂ ಮಹಿಳೆ ತನ್ನ ಪತಿಗೆ ಈ ಬಗ್ಗೆ ಏನೂ ಹೇಳಿರಲಿಲ್ಲ. ಕೀಚಕ ಶ್ರೀಮಂತ್ ಕೃತ್ಯದಿಂದ ನೊಂದಿದ್ದ ಮಹಿಳೆ ಬಳಿಕ ತನ್ನ ಪತಿಯ ಮುಂದೆ ಯುವಕನ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.
Advertisement
ಬಳಿಕ ಪತಿ ಹೇಳಿದಂತೆ ಮಹಿಳೆ ಶ್ರೀಮಂತ್ಗೆ ಕರೆ ಮಾಡಿ 8ನೇ ಮೈಲಿಯ ಜಂಕ್ಷನ್ ಬಳಿ ಬರುವಂತೆ ಸೂಚಿಸಿದ್ದರು. ತಾನಿಟ್ಟಿರುವ ಬೇಡಿಕೆ ಒಪ್ಪಿರುವಂತೆ ತಿಳಿದಿದ್ದ ಶ್ರೀಮಂತ್, ಅದರಂತೆ ಕಳೆದ ಬುಧವಾರ ಆಕೆ ಹೇಳಿದ ಸ್ಥಳಕ್ಕೆ ಬಂದಿದ್ದ. ಆತ ಬಂದ ವೇಳೆ ಮಹಿಳೆ ಹಾಗೂ ಆಕೆಯ ಪತಿ ಶ್ರೀಮಂತ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ವೇಳೆ ಶ್ರೀಮಂತ್ ಪರಾರಿಯಾಗಲು ಮುಂದಾಗಿದ್ದು, ಆತನನ್ನು ಹಿಡಿದು ದಂಪತಿ ಅಲ್ಲೇ ಇದ್ದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೀಣ್ಯ ಮಹಿಳೆಯ ಜೊತೆ ಫೋನ್ ನಲ್ಲಿ ಅಸಭ್ಯ ವರ್ತನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ ಬಾಬೂರಾವ್ ಮಾತನಾಡಿ, ಮಹಿಳೆ ಸ್ನೇಹಿತರಿಗೆ ಕಾಲ್ ಮಾಡೊದಕ್ಕೆ ಹೋಗಿ ಆರೋಪಿಗೆ ಕಾಲ್ ಹೋಗಿದೆ. ಆದ್ರೆ ಆ ವ್ಯಕ್ತಿ ಪದೇ ಪದೇ ಕಾಲ್ ಮಾಡಿ ಅಸಭ್ಯ ರೀತಿ ಮಾತಾನಾಡ್ತಿದ್ದ. ಮಹಿಳೆ ಕಳೆದ 28ರಂದು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪೊಲಿಸ್ರು ತನಿಖೆ ಮಾಡಿ ಆರೋಪಿಯನ್ನ ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಆರೋಪಿ ಡ್ರೈವರ್ ಕೆಲಸ ಮಾಡ್ತಿದ್ದ ಅಂತಾ ಹೇಳಿದ್ದಾರೆ.