ಮಂಡ್ಯ: ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಸಮಾಧಿ ಮಾಡಲಾಗಿರುವ ಕೆ.ಎಂ.ದೊಡ್ಡಿಯಲ್ಲೇ ಯುವಕನೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ.
ಅಸ್ಸಾಂನಿಂದ ಆಗಮಿಸಿರುವ ಕೆಲವು ಯುವಕರು ಇಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಒಬ್ಬ ಯುವಕ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ಇದನ್ನ ಅರಿತ ಸ್ಥಳೀಯ ಯುವಕರು ನಾವು ಗುರುವನ್ನ ಕಳೆದುಕೊಂಡು ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದರೆ, ಇವ ಇಲ್ಲೇ ಇದ್ದಾನೆ ಏ ಯಾವ ಊರು ನಿಂದು, ನಿನ್ ಐಡಿ ಕಾರ್ಡ್ ತೋರಿಸು ಯಾಕ್ ಹಾಗೆ ಕೂಗುತ್ತೀಯಾ ಎಂದೆಲ್ಲಾ ವಿಚಾರಿಸಿದ್ದಾರೆ.
ಕೊನೆಗೆ ಸ್ಥಳೀಯ ಯುವಕರು ಪ್ರಶ್ನೆ ಮಾಡುತ್ತಿದ್ದಂತೆ ಭಾರತ್ ಮಾತಾಕಿ ಜೈ ಎಂದು ಒಮ್ಮೆ ಹೇಳಿ ಮತ್ತೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವಕರು ಆತನಿಗೆ ಒಂದು ಕೊಟ್ಟು ಭಾರತಕ್ಕೆ ಜೈಕಾರ ಕೂಗಿಸಿದ್ದಾರೆ. ನಂತರ ಆತನನ್ನ ಕೂಲಿಗೆ ಕರೆತಂದಿದ್ದ ಮೇಸ್ತ್ರಿಗೆ ಇದೆಲ್ಲಾ ಸರಿ ಹೋಗಲ್ಲ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ.
https://www.youtube.com/watch?v=gPEqbHEdcfg
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv