ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಮಂಡ್ಯದ ಯುವಕನೊಬ್ಬ ಉರುಳು ಸೇವೆ ಮಾಡಿದ್ದಾರೆ.
ಬೆನಕಪ್ರಸಾದ್ ಉರುಳು ಸೇವೆ ಮಾಡಿದ ಯುವಕ. ಬೆನಕಪ್ರಸಾದ್ ಪಕ್ಕಾ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯಾಗಿದ್ದು, ಈಗ ಅವರ ಪತ್ನಿ, ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಮಂಡ್ಯ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಈ ಸೇವೆ ಮಾಡಿದ್ದಾರೆ.
ಬೆನಕಪ್ರಸಾದ್ ಕೆ.ಆರ್ ನಗರ ಪಟ್ಟಣ ಆಂಜನೇಯ ಬ್ಲಾಕ್‍ನ ಆಂಜನೇಯಸ್ವಾಮಿ ದೇವಾಲಯದಿಂದ ಹಳೆ ಎಡತೊರೆ ಆಂಜನೇಯಸ್ವಾಮಿ ದೇವಾಲಯದವರೆಗೆ ಉರುಳು ಸೇವೆ ಮಾಡಿದ್ದಾರೆ. ಬೆಳಗ್ಗಿನ ಜಾವ 2 ಗಂಟೆಗೆ ಎದ್ದು ಸುಮಾರು 5 ಕಿಲೋಮೀಟರ್ ದೂರ ಉರುಳು ಸೇವೆ ಮಾಡಿದ್ದಾರೆ.