Bagalkot

ಕೊಡಲಿಯಿಂದ ತಲೆಗೆ ಹೊಡೆದು ಯುವಕನ ಕೊಲೆ

Published

on

Share this

ಬಾಗಲಕೋಟೆ: ಯುವಕನ ತಲೆಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಚಿಕ್ಕನಾಳದಲ್ಲಿ ನಡೆದಿದೆ.

ವಿಠ್ಠಲ್ ಸೀಮಿ(27) ಕೊಲೆಯಾದ ಯುವಕ. ಚಿಕ್ಕನಾಳ ಗ್ರಾಮದ ಹತ್ತಿರ ಸಾಯಿ ಪಾರ್ಕ್ ಹೋಟೆಲ್ ಬಳಿ ಸ್ನೇಹಿತರ ಜೊತೆ ವಿಠ್ಠಲ ಊಟಕ್ಕೆ ಬಂದಿದ್ದರು. ಈ ವೇಳೆ ಜಗದೀಶ್ ಭಂಡಾರಿ ಎನ್ನುವವರು ಈತನನ್ನು ನೋಡಿ ಆಕ್ರೋಶಕೊಂಡು ಕೊಡಲಿಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾರೆ. ಇಬ್ಬರು ಕುಷ್ಟಗಿ ತಾಲೂಕಿನ ಮಿಟ್ಟಲಕೋಡ ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ

ಕೊಲೆಗೆ ಕಾರಣವೇನು?
2016ರಲ್ಲಿ ಜಗದೀಶ್ ಭಂಡಾರಿ ಮನೆಯ ಒಬ್ಬ ಅಪ್ರಾಪ್ತೆ ಜೊತೆ ವಿಠ್ಠಲ್ ನಾಪತ್ತೆಯಾಗಿದ್ದರು. ಆಗ ವಿಠ್ಠಲ ವಿರುದ್ಧ ಈ ಕುಟುಂಬ ಫೊಕ್ಸೋ ಕೇಸ್ ದಾಖಲಿಸಿತ್ತು. ಈ ಪರಿಣಾಮ ವಿಠ್ಠಲ್ ಜೈಲು ಕೂಡ ಸೇರಿದ್ದು, ನಂತರ ಬಿಡುಗಡೆಯಾಗಿದ್ದರು. ಈ ಹಳೆಯ ದ್ವೇಷಕ್ಕೆ ಜಗದೀಶ್ ಅವರು ಈ ಕೊಲೆ ಮಾಡಿದ್ದರೆಂಬ ಶಂಕೆ ವ್ಯಕ್ತವಾಗುತ್ತಿದೆ.ಇದನ್ನೂ ಓದಿ:ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ: ಈರಣ್ಣ ಕಡಾಡಿ

ಘಟನೆ ನಡೆದ ಸ್ಥಳಕ್ಕೆ ಅಮೀನಗಡ ಪೊಲೀಸರು ಭೇಟಿ ನೀಡಿ ಈ ಕುರಿತು ಪರಿಶೀಲನೆ ಮಾಡುತ್ತಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications