ಚಿತ್ರದುರ್ಗ: ಜಮೀನು ವಿವಾದದಿಂದಾಗಿ ಸಹೋದರನ ಮಗನೇ ಮದ್ಯದ ಅಮಲಿನಲ್ಲಿ ತನ್ನ ದೊಡ್ಡಪ್ಪನನ್ನು ಕೊಲೆಗೈದಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಆದ್ರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ಹಲವು ವರ್ಷಗಳಿಂದ ಜಮೀನನ್ನು ಪಾಲು ಮಾಡಿ ವೈಯಕ್ತಿಕವಾಗಿ ಭಾಗ ಮಾಡಿಕೊಡುವ ವಿಚಾರದಲ್ಲಿ ಕುಟುಂಬದ ಹಿರಿಯರಾದ ನಾಗಣ್ಣ ಹಾಗು ಆತನ ಸಹೋದರನ ಮಗನಾದ ಲೋಹಿತ್ ನಡುವೆ ಪದೇ ಪದೇ ಕಲಹ ನಡೆಯುತಿತ್ತು. ಇದೇ ವಿಚಾರವಾಗಿ ಮತ್ತೆ ತಗಾದೆ ಶುರುವಾಗಿದ್ದು, ಮದ್ಯಪಾನದ ಅಮಲಿನಲ್ಲಿದ್ದ ಲೋಹಿತ್ ಮಾತಿಗೆ ಮಾತು ಬೆಳೆಸಿ, ತನ್ನ ದೊಡ್ಡಪ್ಪ ಅನ್ನೋದನ್ನು ಲೆಕ್ಕಿಸದೇ ಒನಕೆಯಿಂದ ಬಲವಾಗಿ ಹೊಡೆದಿದ್ದಾನೆ.
ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಸುಸ್ತಾದ 60 ವರ್ಷದ ನಾಗಣ್ಣ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ವೇಳೆ ಇವರ ಜಗಳ ಬಿಡಿಸಲು ಹೋದ ಸಂಬಂಧಿ ಕುಮಾರಪ್ಪಗೂ ಕೂಡ ಗಾಯಗಳಾಗಿದ್ದೂ ಹೊಸದುರ್ಗ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.
ಈ ವಿಷಯ ತಿಳಿದ ಹೊಸದುರ್ಗ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದಾರೆ. ತಲೆತಪ್ಪಿಸಿಕೊಂಡಿರೋ ಆರೋಪಿ ಲೊಹಿತ್ ನ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv