ಚಿಕ್ಕಮಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತರಿಂದಲೇ ಸಹೋದರನ ಮಗ (Brother Son) ಕೊಲೆಯಾದ ವಿಷಯ ಕೇಳಿ ಚಿಕ್ಕಪ್ಪ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ಬಳಿ ನಡೆದಿದೆ.
ಕಳೆದ ರಾತ್ರಿ ಮನೆಯಲ್ಲಿದ್ದ ಓಂಕಾರ್‌ನನ್ನು (30) ಸ್ನೇಹಿತರೇ ಕರೆದೊಯ್ದು ನಗರದ ಎಪಿಎಂಸಿ (APMC) ಯಾರ್ಡ್‍ನಲ್ಲಿ ಕೊಲೆ ಮಾಡಿದ್ದರು. ಹಣಕಾಸಿನ ವಿಚಾರವಾಗಿ ಸ್ನೇಹಿತರೇ ಮಾತುಕತೆಗೆ ಎಪಿಎಂಸಿ ಯಾರ್ಡ್‍ಗೆ ಕರೆಸಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಈ ವಿಷಯ ಕೇಳಿ ಓಂಕಾರ್ ಚಿಕ್ಕಪ್ಪ ಪ್ರಕಾಶ್ (55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸೂರ್ಯ ಹುಟ್ಟಿ-ಮುಳುಗುವಷ್ಟರಲ್ಲಿ ಒಂದೇ ಮನೆಯಲ್ಲಿ ಇಬ್ಬರು ಸಾವನ್ನಪ್ಪಿರೋದ್ರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದವನನ್ನ ಕರೆತಂದು ಕೊಂದ ಗೆಳೆಯರು!
ಒಂದೇ ಕುಟುಂಬದ ಅಕ್ಕಪಕ್ಕದ ಮನೆಯಲ್ಲಿ ಎರಡು ಶವಗಳಿದ್ದು ಮನೆಯವರ ಜೊತೆ ಬೀದಿಯ ಜನ ಕೂಡ ಕಣ್ಣೀರಿಟ್ಟಿದ್ದಾರೆ. ಓಂಕಾರ್‌ಗೆ 2 ವರ್ಷ ಮತ್ತು ನಾಲ್ಕು ತಿಂಗಳ ಇಬ್ಬರು ಮಕ್ಕಳಿದ್ದರು. ಇದೀಗ ಓಂಕಾರ್ ಮೃತಪಟ್ಟ ಹಿನ್ನೆಲೆ ಹೆಂಡತಿ, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್ – ಮೈಸೂರಿನಲ್ಲಿ ಮನೆ ಮಾಲೀಕ, ಮೊಬೈಲ್ ಕೊಟ್ಟವರು ವಶಕ್ಕೆ