ಬೆಂಗಳೂರು: ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರೋ ಘಟನೆ ನಗರದ ರಾಜಗೋಪಾಲನಗರದಲ್ಲಿ ನಡೆದಿದೆ.
ಹೇಮಂತ ಕೊಲೆಯಾದ ಯುವಕ. ಸೋಮವಾರ ರಾತ್ರಿ ಸುಮಾರು 8.30ರ ವೇಳೆಯಲ್ಲಿ ಹೇಮಂತ್ ತನ್ನ ಗೆಳೆಯನ ಜೊತೆ ಒಂದು ರೌಂಡ್ ಎಣ್ಣೆ ಪಾರ್ಟಿ ಮುಗಿಸಿ ಇನ್ನೇನು ವಾಪಸ್ಸು ಮನೆ ಕಡೆ ಮುಖಮಾಡಿದ್ದ. ಅಷ್ಟರಲ್ಲೆ ತನ್ನ ಹಳೆ ದೋಸ್ತಿ ಮಧು ಯಮನಂತೆ ಎದುರುಗಡೆ ಸಿಕ್ಕಿದ್ದಾನೆ. ಈ ಹಿಂದೆ ಹೇಮಂತ ಹುಡುಗಿ ವಿಚಾರವಾಗಿ ಮಧುಗೆ ಹೊಡೆದಿದ್ದ ಎನ್ನಲಾಗಿದೆ.
ಅದೇ ಕಾರಣಕ್ಕೆ ಹೇಮಂತ್‍ಗೆ ಚಟ್ಟ ಕಟ್ಟಲೇಬೇಕೆಂದು ಟೈಂಗಾಗಿ ಮಧು ಕಾದಿದ್ದ. ಹೇಮಂತ ಒಬ್ಬನೇ ಸಿಕ್ಕಿದ್ದರಿಂದ ಮಧು ಡ್ರ್ಯಾಗರ್ ತೆಗೆದು ಆತನಿಗೆ ಚುಚ್ಚಿದ್ದಾನೆ. ಪರಿಣಾಮ ಹೇಮಂತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆ ನಡೆದ ಒಂದು ಗಂಟೆ ಒಳಗಡೆ ಅರೋಪಿ ಮಧುವನ್ನ ರಾಜಗೋಪಾಲನಗರ ಪೋಲಿಸರು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡ್ತಿದ್ದಾರೆ.