ಹಣದ ವ್ಯವಹಾರಕ್ಕಾಗಿ ಯುವಕನ ಕೊಲೆ

Public TV
1 Min Read
dwd murder copy

ಧಾರವಾಡ: ಹಣದ ವ್ಯವಹಾರಕ್ಕಾಗಿ ಯುವಕ ಕೊಲೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ.

ನಾಗರಾಜ್ ಹರಪನಹಳ್ಳಿ (23) ಕೊಲೆಯಾದ ಯುವಕ. ನಾಗರಾಜ್ ನಗರದ ಕೆಲಗೇರಿ ನಿವಾಸಿಯಾಗಿದ್ದು, ಶುಕ್ರವಾರ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ.

ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದ ವರ್ಕಿಂಗ್ ವುಮನ್ ಹಾಸ್ಟೆಲ್ ಹಿಂದೆ ಈ ಕೊಲೆ ನಡೆದಿದೆ. ಕಳೆದ ಶುಕ್ರವಾರ ದುಷ್ಕರ್ಮಿಗಳು ನಾಗರಾಜ್‍ನನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಹೋಗಿದ್ದಾರೆ. ಸೋಮವಾರ ಮೃತ ದೇಹದ ವಾಸನೆ ಎದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಕೊಲೆಯಾದ ಯುವಕನ ಮೃತ ದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *