ಕೊಪ್ಪಳ: ಜಿಲ್ಲೆಯ ಸಬ್ ರಿಜಿಸ್ಟರ್ ಆಫೀಸ್ ಅಲ್ಲಿ ಯುವತಿ ಇಲ್ಲದೇನೆ ಯುವಕನೊಬ್ಬನ ಜೊತೆ ಮದುವೆ ಮಾಡಿಸಿರುವ ವಿಚಿತ್ರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಗಂಗಾವತಿ ತಾಲೂಕಿನ ಸಬ್ ರಿಜಿಸ್ಟರ್ ಆಫೀಸ್‍ನಲ್ಲಿ 2018 ನವಂಬರ್ 23ರಂದು ಇಂಥಹದೊಂದು ಮಹಾ ಎಡವಟ್ಟು ನಡೆದಿದೆ. ಗಂಗಾವತಿಯ ಲಯನ್ಸ್ ಕ್ಲಬ್ ಸ್ಕೂಲ್ ಅಲ್ಲಿ ಇಂಗ್ಲಿಷ್ ಶಿಕ್ಷಕನಾಗಿರುವ ಗುರುಪಾದಯ್ಯ ಹಿರೇಮಠ್ ಈ ಪ್ರಕರಣದ ಮೊದಲ ಆರೋಪಿ. ಈ ಮೊದಲು ಇವರಿಗೆ ಒಂದು ವಿವಾಹವಾಗಿದ್ದರೂ, ಎರಡನೇ ಮದುವೆಗೆ ಹುಡುಗಿಯನ್ನು ನೋಡಲು ಹೋಗಿ ಎಡವಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
Advertisement
Advertisement
ಗುರುಪಾದಯ್ಯ ಒಬ್ಬ ಸರ್ಕಾರಿ ಶಿಕ್ಷಕ ಈತನಿಗೆ ಈಗಾಗಲೇ ಒಂದು ಮದುವೆಯಾಗಿದ್ದು, 2ನೇ ಮದುವೆಗಾಗಿ ಹುಡುಗಿ ನೋಡಲು ಹೋಗಿದ್ದಾನೆ. ಹುಡುಗಿ ಇಷ್ಟ ಆಗಿದ್ದರಿಂದ ಹುಡುಗಿಯ ಫೋಟೋ ಒಂದನ್ನು ಕೇಳಿ ಪಡೆದುಕೊಂಡು ಬಂದಿದ್ದಾನೆ. ಹುಡುಗಿಯ ಮನೆಯವರಿಗೆ ಗುರುಪಾದಯ್ಯನ ಮೊದಲನೇ ಮದುವೆ ವಿಷಯ ತಿಳಿಯುತ್ತಿದ್ದಂತೆ ಹುಡುಗಿಯನ್ನು ಕೊಡಲು ನಿರಾಕರಿಸಿದ್ದಾರೆ. ಆದರೆ ಗುರುಪಾದಯ್ಯ ತನ್ನ ಅಸಲಿ ಬುದ್ಧಿಯನ್ನು ತೋರಿಸಿ ಇದೀಗ ಪೇಚಿಗೆ ಸಿಲುಕಿ ಹಾಕಿಕೊಂಡಿದ್ದಾನೆ.
Advertisement
Advertisement
ಗುರುಪಾದಯ್ಯ ತನ್ನ ಜಾಣ್ಮೆ ಮತ್ತು ಕಾಂಚಾಣ ತೋರಿಸಿ ಸಬ್ ರಿಜಿಸ್ಟರ್ ಆಫೀಸ್ ಗೆ ಯುವತಿ ಇಲ್ಲದ್ದೇನೆ ರಿಜಿಸ್ಟರ್ ಮ್ಯಾರೇಜ್ ಡಾಕ್ಯುಮೆಂಟ್ಸ್ ರೆಡಿ ಮಾಡಿಸಿದ್ದಾನೆ. ಹುಡುಗಿ ಫೋಟೋ ಎಡಿಟ್ ಮಾಡಿಸಿ, ಅಷ್ಟೇ ಅಲ್ಲದೇ ಫೋರ್ಜರಿ ಸೈನ್ ಮಾಡಿಸಿ ನಾನು ಯುವತಿಯನ್ನು ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಆಗಿದ್ದೇನೆ ಎನ್ನುವ ರೀತಿ ಎಲ್ಲಾ ರೀತಿಯ ದಾಖಲೆಗಳನ್ನು ತಯಾರು ಮಾಡಿಸಿದ್ದಾನೆ ಎಂದು ಖುದ್ದು ಯುವತಿಯೇ ಆರೋಪ ಮಾಡಿದ್ದಾಳೆ. ಆದರೆ ಗುರುಪಾದಯ್ಯನ ಪರವಾಗಿ ನಿಂತ ಸಬ್ ರಿಜಿಸ್ಟರ್ ಆಫೀಸರ್ ಫರೀದಾ ಬೇಗಂ ಹುಡುಗಿ ಮತ್ತು ಹುಡುಗ ಇಬ್ಬರೂ ನಮ್ಮ ಆಫೀಸ್ ಗೆ ಬಂದು ಮದುವೆಯಾಗಿದ್ದಾರೆ ಎಂದು ವಾದ ಮಾಡುತ್ತಾರೆ.
ಇದರಿಂದ ಬೇಸತ್ತ ಯುವತಿ ಮನೆಯವರು ಗಂಗಾವತಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಯುವತಿ ಕಡೆಯವರು ಅಸಹಾಯಕರು ಎಂದು ತಿಳಿದಿದ್ದ ಗುರುಪಾದಯ್ಯ ಪೊಲೀಸ್ ಠಾಣೆಯಲ್ಲೂ ತನ್ನ ಪವರ್ ತೋರಿಸಿದ್ದಾನೆ ಎನ್ನುವ ಆರೋಪ ಸಹ ಕೇಳಿ ಬರುತ್ತಿದೆ. ಖುದ್ದು ಯುವತಿಯೇ ನಾನು ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿಲ್ಲಾ ಅಂತಾ ಹೇಳುತ್ತಿದ್ದರೆ, ಪೊಲೀಸರು ಮಾತ್ರ ತುಟಿ-ಪೀಠಕ್ ಎನ್ನದೇ ಗಪ್ ಚುಪ್ ಆಗಿದ್ದಾರೆ. ಪೊಲೀಸರ ಈ ವರ್ತನೆ ಸಾಕಷ್ಟು ಅನುಮಾನಕ್ಕೆ ಇಡು ಮಾಡಿಕೊಟ್ಟಿದೆ. ಯುವತಿ ನನಗೆ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಬೇಡಿಕೊಳ್ಳುತ್ತಿದ್ದಾಳೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv