– ಯುವಕನ ಕಾರು, ಚಿನ್ನಾಭರಣ, ನಗದು ದರೋಡೆ
ಮಂಗಳೂರು: ಹನಿಟ್ರ್ಯಾಪ್ ಮೂಲಕ ಯುವಕನೊಬ್ಬನನ್ನು ತಂಡವೊಂದು ಬ್ಲ್ಯಾಕ್‍ಮೇಲ್ ಮಾಡಿ ದರೋಡೆ ಮಾಡಿರೋ ಘಟನೆ ವಿಟ್ಲದಲ್ಲಿ ನಡೆದಿದೆ.
ಕುಡ್ತಮುಗೇರು ನಿವಾಸಿ ಮಹಮ್ಮದ್ ಹನೀಫ್‍ಗೆ ಫೇಸ್‍ಬುಕ್ ನಲ್ಲಿ ಫೌಝಿಯಾ ಎಂಬಾಕೆ ಪರಿಚಯವಾಗಿದ್ದಳು. ಶುಕ್ರವಾರ ರಾತ್ರಿ ಫೌಝಿಯಾ 5 ಸಾವಿರ ರೂಪಾಯಿ ಬೇಕೆಂದು ಕೇಳಿ ಹನೀಫ್ ಫ್ಲಾಟ್ ಗೆ ಬಂದಿದ್ದಳು.
Advertisement
ಇವರನ್ನು ಟವೇರಾದಲ್ಲಿ ಫಾಲೋ ಮಾಡಿಕೊಂಡು ಬಂದಿದ್ದ ಐವರ ತಂಡ, ಪಶ್ಚಿಮ ಬಂಗಾಳದ ಯುವತಿಯನ್ನು ಕರೆತಂದು ಹನೀಫ್ ಜೊತೆ ಬೆತ್ತಲೆಯಾಗಿ ನಿಲ್ಲಿಸಿ ಫೋಟೋ ತೆಗೆದಿದ್ದಾರೆ. ಆ ನಂತರ 5 ಲಕ್ಷ ರೂ. ಕೊಡುವಂತೆ ಪೀಡಿಸಿದ್ದಲ್ಲದೆ ರಾತ್ರಿ 2 ಗಂಟೆ ವರೆಗೂ ಹನೀಫ್‍ಗೆ ಥಳಿಸಿದ್ದಾರೆ.
Advertisement
Advertisement
ಕೊನೆಗೆ ಮನೆಯ ಕಪಾಟು ಒಡೆದು 60 ಗ್ರಾಮ್ ಚಿನ್ನಾಭರಣ, 17 ಸಾವಿರ ನಗದು ಹಾಗೂ ಹನೀಫ್ ಬಳಸುತ್ತಿದ್ದ ಸ್ವಿಫ್ಟ್ ಕಾರನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೆ ಕೊಲ್ಲುವ ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ.
Advertisement
ಹನೀಫ್‍ರನ್ನು ಸದ್ಯ ಚಿಕಿತ್ಸೆಗಾಗಿ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೀಫ್‍ಗೆ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಫೌಜಿಯಾ ಮತ್ತು ಐವರ ತಂಡ ಈ ಕೃತ್ಯ ಎಸಗಿದ್ದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹನಿಟ್ರ್ಯಾಪ್ ಮತ್ತು ದರೋಡೆ ಆರೋಪದಡಿ ಪ್ರಕರಣ ದಾಖಲಾಗಿದೆ.