ಬೆಳಗಾವಿ: ಯುವತಿ ಜೊತೆ ಒಡನಾಟ ಹೊಂದಿದ್ದಕ್ಕೆ ಆಕೆಯ ಸಂಬಂಧಿಕರು ಹಣದ ಬೇಡಿಕೆಯಿಟ್ಟು ಯುವಕನಿಗೆ ಕಿರುಕುಳ ನೀಡಿದ್ದಕ್ಕೆ ಆತ ಸೆಲ್ಫಿ ವಿಡಿಯೋ ಮಾಡಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕೊರಿಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಯುವಕ ಸಾವಿನ ನಂತರ ಈ ಸೆಲ್ಫಿ ವಿಡಿಯೋ ವೈರಲ್ ಆಗಿದೆ. ಮೃತ ಯುವಕ ಮಹಾಂತೇಶ್ ಏಣಗಿ ಅದೇ ಗ್ರಾಮದ ಯುವತಿ ಜೊತೆ ಒಡನಾಟ ಹೊಂದಿದ್ದನು.
ನಮ್ಮ ಮಗಳ ಜೊತೆ ಹೇಗೆ ಮಾತನಾಡಿದೆ ಎಂದು ಆರೋಪಿಗಳಾದ ಗುಳಪ್ಪಾ, ವೀರಭದ್ರ ಹಾಗೂ ನಾಗಪ್ಪ ಹೊಳಿ ಮೂವರು ಸೇರಿ ಮಹಾಂತೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಯ ಸಂಬಂಧಿಕರಿಂದ 7 ಲಕ್ಷ ರೂ. ದಂಡ ರೂಪವಾಗಿ ವಸೂಲಿ ಮಾಡಿದ್ದಾರೆ. ಆದಾದ ಮೇಲೆ ಮತ್ತೆ 3 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದಾರೆ.
ಮಹಾಂತೇಶ್ ಬೆಳೆದ ಹತ್ತಿಯನ್ನು ಮಾರಾಟ ಮಾಡಿ ಹಣವನ್ನು ಯುವತಿಯ ಸಂಬಂಧಿಕರಿಗೆ ನೀಡಿದ್ದನು. ಇದೀಗ ಯುವತಿ ಮನೆಯವರು ಮತ್ತಷ್ಟು ಹಣದ ಬೇಡಿಕೆ ಇಟ್ಟಿದ್ದು, ಇದರಿಂದ ಬೇಸತ್ತ ಮಹಾಂತೇಶ್ ತನಗಾದ ಅನ್ಯಾಯ ಹೇಳಿಕೊಂಡು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಈ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews