-ಸ್ಥಳೀಯರಿಂದ ಯುವಕನ ರಕ್ಷಣೆ
-ಯುವತಿ ತಾಯಿಯ ಬಂಧನ
ಚಂಡೀಗಢ: ಪ್ರೇಯಸಿಯನ್ನು ಕಾಣಲು ಹೋದ ಪ್ರಿಯಯಕರನಿಗೆ ಯುವತಿಯ ತಾಯಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಪಂಜಾಬ್ ರಾಜ್ಯದ ಬಟಿಂಡಾದ ಸಂಗರೂರಿನಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವತಿಯ ಆಹ್ವಾನದ ಮೇರೆಗೆ ಧೂರಿ ಗ್ರಾಮದ ಯುವಕ ಆಕೆಯ ಮನೆಗೆ ಹೋಗಿದ್ದನು. ಮನೆಗೆ ಬಂದ ಯುವಕನಿಗೆ ಯುವತಿ ತಾಯಿ ಶಿಂದರ್ ಕೌರ್ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾಳೆ. ಬೆಂಕಿ ತಗುಲುತ್ತಿದ್ದಂತೆ ಯುವಕ ಮನೆಯಿಂದ ಹೊರ ಬಂದು ಓಡಾಡಿದ್ದಾನೆ. ಆದ್ರೂ ಬೆಂಕಿ ಯುವಕನನ್ನು ಸಂಪೂರ್ಣ ಆವರಿಸಿದ್ದು, ಹಾಗೆಯೇ ಪ್ರಾಣ ಉಳಿಸಿಕೊಳ್ಳಲು ಓಡಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸ್ಥಳೀಯರು ಯುವಕನನ್ನು ರಕ್ಷಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಿಂದರ್ ಕೌರಳನ್ನು ಬಂಧಿಸಿದ್ದಾರೆ. ನನ್ನ ಮಗಳನ್ನು ಮನೆಯಿಂದ ಕರೆದುಕೊಂಡಲು ಬಂದಿದ್ದನು. ತನ್ನ ಜೊತೆ ಬರಲು ಮಗಳ ಮೇಲೆ ಒತ್ತಡ ಹಾಕುತ್ತಿದ್ದನು ಎಂದು ಶಿಂದರ್ ಹೇಳಿದ್ದಾಳೆ.