ಬೆಂಗಳೂರು: ಮೊಬೈಲ್‍ನಲ್ಲಿ ಸದ್ಯ ನಕಲಿ ಆ್ಯಪ್‍ಗಳು ಲಗ್ಗೆಯಿಟ್ಟಿವೆ. ಯುವಸಮುದಾಯಕ್ಕೆ ಮಂಚದ ಆಸೆ ತೋರಿಸಿ ಲಕ್ಷ ಲಕ್ಷ ರೂ. ಹಣವನ್ನು ವಸೂಲಿ ಮಾಡಿ ಮಂಕುಬೂದಿ ಎರಚುತ್ತಿವೆ.
ಯುವಕರು ಸೆಕ್ಸ್ ಆ್ಯಪ್‍ಗಳಿಗೆ ದಾಸರಾಗ್ತಿರೋದಲ್ಲದೆ ದುಡ್ಡು ಕೂಡ ಕಳೆದುಕೊಳ್ತಿದ್ದಾರೆ. ಖದೀಮರು ಮೊಬೈಲ್ ಅಪ್ಲಿಕೇಶನ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಇಲ್ಲಿ ಯುವಕರು ಹಾಳಾಗ್ತಿರೋದರ ಜೊತೆ ಜೊತೆಗೆ ಹಣವನ್ನೂ ಕಳೆದುಕೊಳ್ತಿದ್ದಾರೆ. `ನಿಯರ್ ಬೈ’ `ಬಿ ಗೋ ಲೈವ್’, `ಕ್ಲಬ್ ಫೋರ್’ ಅನ್ನೋ ಮೊಬೈಲ್ ಆ್ಯಪ್‍ಗಳು ಯುವಕರನ್ನ ಸೆಳೆಯುತ್ತಿದ್ದು ಹಣ ಕೊಳ್ಳೆ ಹೊಡೆಯುತ್ತಿವೆ.
Advertisement
ಆ್ಯಪ್ ಡೌನ್ಲೋಡ್ ಮಾಡಿಕೊಂಡು ಒಂದು ದಿನದ ಚಾರ್ಜ್ ಅಂತ 37 ರೂಪಾಯಿ ಪೀಕ್ತಾರೆ. ಬಳಿಕ ಹುಡುಗೀರ ಫೋಟೋಸ್ ತೋರ್ಸಿ ಮಂಕುಬೂದಿ ಎರಚುತ್ತಾರೆ. ಈ ಹುಡುಗೀರ ಜೊತೆ ಸೆಕ್ಸ್ ಚಾಟ್ ಮಾಡ್ಬೇಕಾ? 100 ರೂಪಾಯಿ ಪಾವತಿಸಿ ಅಂತಾರೆ. ನೀವು ಹಣ ಕಟ್ಟುತ್ತಿದ್ದಂತೆ, ನಿಮಗೆ ಗೊತ್ತಿಲ್ಲದ ಹಾಗೆ ಓಟಿಪಿ ನಂಬರ್ ಇಲ್ಲದೆ ಹಣ ಪಾವತಿಯಾಗ್ತಿರುತ್ತದೆ.
Advertisement
ಇದನ್ನೂ ಓದಿ: ಹುಡುಗರೇ ಬೀ ಕೇರ್‍ಫುಲ್.. ಫೇಸ್‍ಬುಕ್‍ನಲ್ಲಿದೆ ಹೋಮೊ ಸೆಕ್ಸ್ ಪೇಜ್!
Advertisement
ಈ ಮಾಡೆಲ್‍ಗಳ ಜೊತೆ ಸೆಕ್ಸ್ ವಿಡಿಯೋ ಚಾಟ್ ಮಾಡ್ಬೇಕಾ? 800 ರೂ. ಪಾವತಿಸಿ ಅಂತಾರೆ. ಕೊನೆಗೆ ಬಿಡ್ಡಿಂಗ್ ನಡೀತಿದೆ, ಯಾರು ಹೆಚ್ಚು ಪಾವತಿಸುತ್ತಾರೋ ಅವರ ಜೊತೆ ಸೆಕ್ಸ್ ವಿಡಿಯೋ ಚಾಟ್ ಮಾಡ್ತೀವಿ ಅಂತಾರೆ. ಹೀಗೆ ದುಡ್ಡು ಕಸಿದುಕೊಳ್ಳಲು ಏನೇನು ಮಾಡ್ಬೇಕೋ ಅದೆಲ್ಲವನ್ನೂ ಮಾಡ್ತಾರೆ.
Advertisement
ಇದನ್ನೂ ಓದಿ: 20 ರೂ. ಪೌಡರ್ ಇಟ್ಕೊಂಡು ಮಸಾಜ್ ಹೆಸ್ರಲ್ಲಿ ಸೆಕ್ಸ್ ದಂಧೆ!
ಆದ್ರೆ ಇದೆಲ್ಲಾ ನಕಲಿಯಾಗಿದ್ದು, ಯುವಕರ ವೀಕ್‍ನೆಸ್ ಬಂಡವಾಳ ಮಾಡಿಕೊಂಡಿರುವ ಖದೀಮರು ಹಣ ಗಳಿಸೋಕೆ ಮಾಡಿಕೊಂಡಿರುವ ಹೊಸ ದಂಧೆ ಇದಾಗಿದೆ. ಇದರ ಬೆನ್ನತ್ತಿರುವ ನವೀನ್ ಎಂಬವರು ಎಲ್ಲಾ ದಾಖಲೆ ಮಾಹಿತಿಯೊಂದಿಗೆ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಕ್ರಮದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!