ಮುಂಬೈ: ತಂಗಿಯ ಫಸ್ಟ್ ಪೀರಿಯಡ್ (Periods) ನ ರಕ್ತದ ಕಲೆ ನೋಡಿದ ಸಹೋದರ ಅನುಮಾನಗೊಂಡು ಆಕೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರ (Maharastra) ದ ಥಾಣೆಯಲ್ಲಿ ನಡೆದಿದೆ.
ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಉಲ್ಲಾಸ್‍ನಗರ ಪ್ರದೇಶದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
12 ವರ್ಷದ ಹುಡುಗಿಗೆ ಕೆಲವು ದಿನಗಳ ಹಿಂದೆ ಋತುಸ್ರಾವ ಆರಂಭವಾಗಿದೆ. ಆದರೆ ಇದು ಅವಳ ಗಮನಕ್ಕೆ ಬಂದಿರಲಿಲ್ಲ. ಅಲ್ಲದೆ ಅವಳ ಬಟ್ಟೆಯಲ್ಲಿ ರಕ್ತದ ಕಲೆಗಳು ಕಾಣುತ್ತಿದ್ದವು. ಇದನ್ನು ಗಮನಿಸಿದ ಸಹೋದರ ಆಕೆಯನ್ನು ಪ್ರಶ್ನಿಸಿದ್ದಾನೆ. ಯಾರ ಜೊತೆಗೋ ಸಂಭೋಗ ನಡೆಸಿದ್ದಾಳೆ ಎಂದು ಆರೋಪಿಸಿದ್ದಾನೆ.
ಬಾಲಕಿ ತನ್ನ ಅಣ್ಣ ಹಾಗೂ ಅತ್ತಿಗೆ ಜೊತೆ ವಾಸವಾಗಿದ್ದಳು. ಹೀಗಾಗಿ ತನಗೆ ಏನಾಗುತ್ತಿದೆ ಎಂಬುದನ್ನು ಅವರ ಜೊತೆ ಹೇಳಿಕೊಳ್ಳಲು ಹಿಂಜರಿದಿದ್ದಾಳೆ. ಅಲ್ಲದೆ ಋತುಸ್ರಾವದ ಬಗ್ಗೆ ಅವಳಿಗೆ ಯಾವುದೇ ಜ್ಞಾನ ಕೂಡ ಇರಲಿಲ್ಲ. ಇತ್ತ ಸಹೋದರಿ ಬಟ್ಟೆಯಲ್ಲಿ ರಕ್ತದ ಕಲೆಗಳನ್ನು ಕಂಡು ಅನುಮಾನದಿಂದ ಸಿಟ್ಟುಗೊಂಡ ಅಣ್ಣ, ಆಕೆಯ ಬಾಯಿ, ನಾಲಿಗೆ ಹಾಗೂ ದೇಹದ ಇತರೆ ಭಾಗಗಳನ್ನು ಸುಟ್ಟಿದ್ದಾನೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದುಕೊಮಡು ಹೋಗಲಾಯಿತು. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಘಟನೆ ಸಂಬಂಧ ಸಹೋದರನ ವಿರುದ್ಧ ಉಲ್ಲಾಸ್‍ನಗರ ಪೊಲೀಸ್ ಠಾಣೆ (Ulhasnagar police station) ಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಫ್ಲ್ಯಾಟ್‌ನ 10ನೇ ಮಹಡಿಯಿಂದ ಬಿದ್ದು ನೀಟ್ ವಿದ್ಯಾರ್ಥಿ ಸಾವು