ಬೆಂಗಳೂರು: ಹುಡುಗಿ ವಿಚಾರದಲ್ಲಿ ಹತ್ತು ವರ್ಷಗಳ ಹಿಂದಿನ ಹಳೆ ದ್ವೇಷಕ್ಕೆ ಸತೀಶ್ ಎಂಬಾತ ತನ್ನ ಸ್ನೇಹಿತ ಲತೀಶ್ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ವಿಜಯನಗರದ ಪೈಪ್ ಲೈನ್ ರಸ್ತೆಯ ಮಾರುತಿ ಬಾರ್ ಬಳಿ ಈ ಘಟನೆ ನಡೆದಿದೆ. ಕೊಲೆಯಾದ ಲತೀಶ್ ಆಟೋ ಚಾಲಕನಶಾಗಿದ್ರೆ, ಸತೀಶ್ ಬ್ಯಾಟರಿ ಅಂಗಡಿ ಇಟ್ಟುಕೊಂಡಿದ್ದ.
ಭಾನುವಾರ ರಾತ್ರಿ ಮದ್ಯಪಾನ ಮಾಡುವ ವೇಳೆ ಇಬ್ಬರ ನಡುವೆ ಯುವತಿ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ಹೋಗಿದೆ. ಕುಡಿದ ಮತ್ತಿನಲ್ಲಿ ಸತೀಶ್ ತನ್ನ ಬಳಿ ಇದ್ದ ಪಿಸ್ತೂಲ್‍ನಿಂದ ಲತೀಶ್‍ಗೆ ಗುಂಡಿಕ್ಕಿದ್ದಾನೆ.
ಇನ್ನು ಆರೋಪಿ ಸತೀಶ್ ವಿಜಯನಗರ ಪೊಲೀಸರಿಗೆ ಶರಣಾಗಿದ್ದಾನೆ.