Connect with us

ಕುಡಿತ, ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಕೊಚ್ಚಿ ಕೊಂದ್ರು!

ಕುಡಿತ, ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಕೊಚ್ಚಿ ಕೊಂದ್ರು!

ಮಂಗಳೂರು: ಕುಡಿತ ಹಾಗೂ ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯರಾತ್ರಿ ಮಂಗಳೂರು ನಗರದ ಮರೋಳಿಯಲ್ಲಿ ನಡೆದಿದೆ.

ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಸರಪಲ್ಲ ನಿವಾಸಿ ಪ್ರತಾಪ್ ಕೊಲೆಗೀಡಾದ ಯುವಕ. ಗಾಂಜಾ ಸೇವನೆ ಹಾಗೂ ಮದ್ಯಪಾನ ಮಾಡಿ ತಡರಾತ್ರಿ ಸ್ನೇಹಿತರ ನಡುವೆ ನಡೆದ ಜಗಳ ಪ್ರತಾಪ್ ಕೊಲೆಯಲ್ಲಿ ಅಂತ್ಯವಾಗಿದೆ.

ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿ ಮಿಥುನ್ ಮತ್ತು ಸಹಚರರು ತಡರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಿಥುನ್ ಮತ್ತು ಸಹಚರರು ತಡರಾತ್ರಿ ಪ್ರತಾಪ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪಡೀಲ್ ಎಂಬಲ್ಲಿ ಗ್ಯಾಂಗ್ ಕಟ್ಟಿ ಕೊಂಡಿದ್ದ ಮಿಥುನ್ ತಂಡದಲ್ಲಿ ಕೊಲೆಯಾದ ಪ್ರತಾಪ್ ಕೂಡಾ ಸಕ್ರಿಯನಾಗಿದ್ದ.

ಸುಮಾರು ಎಂಟು ಮಂದಿ ಕೊಲೆ ಮಾಡಿರುವ ಶಂಕೆಯಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಮಂಗಳೂರು ಕಮೀಷನರ್ ಎಂ.ಚಂದ್ರಶೇಖರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

Advertisement
Advertisement