ಕೊಪ್ಪಳ: ಕಳೆದ ಹದಿನೈದು ದಿನಗಳಿಂದ ಕೋತಿಯೊಂದು ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಯುವಕನಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಯಲಬುರ್ಗಾ ತಾಲೂಕಿನ ಜೂಲಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಭೀಮಪ್ಪ ವಾಲೀಕಾರ ಎಂಬವರು ಬುಧವಾರ ತಡರಾತ್ರಿ ದೇಗಲದಲ್ಲಿ ಮಲಗಿಕೊಂಡಾಗ ಕೋತಿ ಬಂದು ಕಚ್ಚಿ ಗಾಯಗೊಳಿಸಿದೆ. ಕೋತಿ ಹುಚ್ಚಾಟಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದು ಭಯಭೀತರಾಗಿದ್ದಾರೆ.
ಕೋತಿ ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಾತ್ರಿ ವೇಳೆ ಹೆಚ್ಚಾಗಿ ಕೋತಿ ದಾಳಿ ಮಾಡುತ್ತಿದೆ. ಹೀಗಾಗಿ ಗ್ರಾಮಸ್ಥರು ದೊಣ್ಣೆ ಹಿಡಿದುಕೊಂಡು ಕೋತಿ ಸೆರೆಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಕೋತಿ ಇಷ್ಟೆಲ್ಲಾ ರಂಪಾಟ ಮಾಡ್ತಿದ್ರೂ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.