ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಮಂಕಿಪಾಕ್ಸ್ ಶಂಕಿತ ಪ್ರಕರಣ ವರದಿಯಾಗಿದೆ. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವಕನಿಗೆ ಮಂಕಿಪಾಕ್ಸ್ ಸೋಂಕು ತಗುಲಿರುವ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮಿಡ್ನಾಪುರದ ಯುವಕ ಕೆಲವು ದಿನಗಳ ಹಿಂದೆ ಯುರೋಪಿಯನ್ ದೇಶದಿಂದ ಭಾರತಕ್ಕೆ ಮರಳಿದ್ದ. ಇದೀಗ ಯುವಕನ ದೇಹದಲ್ಲಿ ಕೆಲವು ಗುಳ್ಳೆಗಳು ಹಾಗೂ ರೋಗದ ಲ್ಷಣಗಳು ಕಂಡುಬಂದಿದೆ. ಇದು ಮಂಕಿಪಾಕ್ಸ್ ಇರಬಹುದು ಎಂದು ಶಂಕಿಸಲಾಗುತ್ತಿದ್ದು, ಆತನ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದನ್ನೂ ಓದಿ: ಶಿಂಜೋ ಅಬೆ ಹತ್ಯೆಗೆ ಕಾರಣ ತಿಳಿಸಿದ ಯಮಗಾಮಿ – ತಾನೇ ತಯಾರಿಸಿದ್ದ ಗನ್ ಬಳಕೆ
Advertisement
Advertisement
ಇದೀಗ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ಯುವಕನಿಗೆ ಮಂಕಿಪಾಕ್ಸ್ ಇದೆಯೇ ಇಲ್ಲವೇ ಎಂಬುದು ಬಳಿಕ ದೃಢವಾಗಲಿದೆ. ಆತನನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಆತನ ಸಂಪರ್ಕದಲ್ಲಿದ್ದವರು ಹಾಗೂ ಕುಟುಂಬಕ್ಕೆ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 15ಕ್ಕೆ ಏರಿಕೆ, 40 ಮಂದಿ ನಾಪತ್ತೆ – ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ
Advertisement
ಮೂಲಗಳ ಪ್ರಕಾರ ಒಬ್ಬನ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಏಕೆಂದರೆ ಆತ ಕಳೆದ ಕೆಲವು ದಿನಗಳ ಹಿಂದೆ ವಿದೇಶದಿಂದ ಹಿಂತಿರುಗಿದ್ದ. ಈ ಬಗ್ಗೆ ಆರೋಗ್ಯ ಇಲಾಖೆ ಯಾವುದೇ ಕ್ರಮವನ್ನು ಸದ್ಯ ತೆಗೆದುಕೊಂಡಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಂಕಿಪಾಕ್ಸ್ ಶಂಕಿತ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿರುವುದು ಇದೇ ಮೊದಲಾಗಿದೆ.