ದಾವಣಗೆರೆ: ಅನ್ಯ ಸಮುದಾಯದಯ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ಯುವಕನ ಮನೆಗೆ ಬೆಂಕಿ ಇಟ್ಟು ಮತ್ತೊಂದು ಮನೆಯ ವಸ್ತುಗಳನ್ನು ಧ್ವಂಸ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಯಲ್ಲಪುರ ಗ್ರಾಮದ ಸುನೀಲ್ ಅದೇ ಗ್ರಾಮದ ಬೇರೆ ಸಮುದಾಯದ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸುತ್ತಿದ್ದನು. ಮನೆಯವರ ವಿರೋಧದ ನಡುವೆಯೂ ಶನಿವಾರ ಅಪ್ರಾಪ್ತ ಬಾಲಕಿಯೊಂದಿಗೆ ಸುನೀಲ್ ಓಡಿ ಹೋಗಿದ್ದನು.
ಬಾಲಕಿ ಪೋಷಕರು ಸುನೀಲ್ ವಿರುದ್ಧ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಹಾಗೂ ಕಿಡ್ನಾಪ್ ಪ್ರಕರಣ ದಾಖಲು ಮಾಡಿದ್ದರು. ಪೊಸ್ಕೋ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುನೀಲ್ ನನ್ನು ಬಂಧಿಸಿದ್ದರು.
ಕಳೆದ ರಾತ್ರಿ ಸುನೀಲ್ ಮನೆ ಮೇಲೆ ಬಾಲಕಿಯ ಪೋಷಕರು ದಾಳಿ ಮಾಡಿ ಮನೆಗೆ ಬೆಂಕಿ ಇಟ್ಟಿದ್ದಲ್ಲದೆ, ಮತ್ತೊಂದು ಮನೆಯ ಬಾಗಿಲು ಸಾಮಾಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ಈ ಸಂಬಂಧ ಸುನೀಲ್ ಪೋಷಕರಿಂದ ಯುವತಿಯ ಮನೆಯವರ 10 ಜನರ ಮೇಲೆ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv