ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಪತಿ!

Public TV
1 Min Read
woman shadow

ಭುವನೇಶ್ವರ್: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಸೀತಾಕಾಂತ್ ಮೋಹಪಾತ್ರ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡಿದ ಪತಿ. ಈತ ಭುವನೇಶ್ವರ್ ನ ಕಪಿಲ ಪ್ರಸಾದ್ ನ ನಿವಾಸಿಯಾಗಿದ್ದು, ಈತನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

ಸೀತಾಕಾಂತ್ 2015ರಲ್ಲಿ ಯುವತಿ ಜೊತೆ ತನ್ನ ಕುಟುಂಬಕ್ಕೆ ತಿಳಿಸದಂತೆ ಗೌಪ್ಯವಾಗಿ ಮದುವೆಯಾಗಿದ್ದನು. ಮದುವೆಯಾದ ನಂತರ ಆತ ಕೆಲಸ ಹುಡುಕಿ ಹೈದರಾಬಾದ್‍ಗೆ ಬಂದಿದ್ದನು. ಹೈದರಾಬಾದ್‍ಗೆ ಹೋಗಿ ಮತ್ತೆ ಆತ ಹಿಂದುರುಗಲಿಲ್ಲ. ಆಗ ಯುವತಿ ಸೀತಾಕಾಂತ್ ಮನೆಗೆ ತೆರಳಿ ಆತನ ಕುಟುಂಬದವರಿಗೆ ತನ್ನ ಮದುವೆಯ ವಿಷಯ ತಿಳಿಸಿದ್ದಳು.

ವಿಷಯ ಗೊತ್ತಾಗಿ ಸೀತಾಕಾಂತ್ ಕುಟುಂಬದವರು ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನಿಂದಿಸಿದ ವಿಷಯವನ್ನು ಆಕೆ ಸೀತಾಕಾಂತ್‍ಗೆ ತಿಳಿಸಿದಾಗ ಆತ ಕೂಡ ಯುವತಿಯನ್ನು ನಿಂದಿಸಿ, ತನ್ನ ಜೀವನದಿಂದ ಹೊರಟು ಹೋಗು ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.

ಈ ಘಟನೆ ನಡೆದು ಸ್ವಲ್ಪ ದಿನಗಳ ನಂತರ ಸೀತಾಕಾಂತ್ ಆಕೆಯ ಜೀವನ ಹಾಳು ಮಾಡಲೆಂದು ಹಾಗೂ ಸಮಾಜದಲ್ಲಿ ಆಕೆಯ ಹೆಸರನ್ನು ಹಾಳು ಮಾಡಲು ತನ್ನ ಪತ್ನಿ ಜೊತೆಗಿನ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋ ವೈರಲ್ ಆಗಿದ್ದನ್ನು ತಿಳಿದ ಯುವತಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಸೀತಾಕಾಂತ್ ಮೇಲೆ ದೂರನ್ನು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *