ರಾಯಚೂರು: ದಾಯಾದಿಗಳ ಜಮೀನು ವಿವಾದದಲ್ಲಿ ಲೇಡಿ ಪಿಎಸ್‌ಐ (PSI) ಮಧ್ಯೆ ಪ್ರವೇಶಿಸಿ ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ರಾಯಚೂರಿನ (Raichur) ಸಿರವಾರದಲ್ಲಿ ಯುವಕ ನಾಪತ್ತೆಯಾಗಿದ್ದಾನೆ.
ಕಾನೂನು ಪದವಿ ವಿದ್ಯಾರ್ಥಿ (Student) ತಾಯಣ್ಣ ನೀಲೊಗಲ್ ನಾಪತ್ತೆಯಾಗಿರುವ ಯುವಕ. ಸಿರವಾರ ಠಾಣೆ ಪಿಎಸ್‌ಐ ಗೀತಾಂಜಲಿ ಶಿಂಧೆ ವಿರುದ್ಧ ಕಿರುಕುಳ ಆರೋಪ ಹೊರಿಸಿದ್ದಾನೆ. ನಿನ್ನೆ ಠಾಣೆಯಲ್ಲಿ ಕೂಡಿಸಿ ಲಾಕಪ್ ನಲ್ಲಿ ಹಾಕಿದ್ದಕ್ಕೆ ಮನನೊಂದು ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ, ಮನೆಯಲ್ಲಿದ್ದವರು ತಡೆದಿದ್ದರು. ಆದರೆ ಬೆಳಗಿನ ಜಾವ ಡೆತ್‌ನೋಟ್ ಬರೆದಿಟ್ಟು ,ಮೊಬೈಲ್ ಸ್ವಿಚ್ಛ್ ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಇದನ್ನೂ ಓದಿ: ದೇವಸ್ಥಾನದ ಆವರಣದ ಒಳಗಡೆ ಮೊಬೈಲ್, ಕ್ಯಾಮೆರಾಕ್ಕೆ ನಿರ್ಬಂಧ ವಿಧಿಸಿ: ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
Advertisement
Advertisement
ಜಾಲಾಪುರ ಸೀಮೆಯಲ್ಲಿರುವ ಜಮೀನು ವಿಚಾರವಾಗಿ 3 ತಿಂಗಳಿಂದ ವಿನಾಕಾರಣ ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದಾರೆ. ರೌಡಿಶೀಟ್ ಓಪನ್ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾನೆ. ಪಿತ್ರಾರ್ಜಿತ ಆಸ್ತಿ ವಿವಾದ ಹಿನ್ನೆಲೆಯಲ್ಲಿ ತಾಯಣ್ಣನ ಮೇಲೆ ಈಗಾಗಲೇ 4 ಪ್ರಕರಣಗಳಿವೆ. ಡೆತ್‌ನೋಟ್ ಬರೆದಿಟ್ಟು ಕಾಣೆಯಾಗಿರುವ ಮಗನನ್ನ ಹುಡುಕಿಕೊಡಿ ಅಂತ ತಾಯಣ್ಣನ ಕುಟುಂಬಸ್ಥರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು