ತುಮಕೂರು: ಸ್ಟಂಟ್ ವೇಳೆ ಯುವಕನ ಕತ್ತು ಮೂಳೆ ಮುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಟಿಕ್‍ಟಾಕ್ ಸ್ಟಂಟ್ ಅಲ್ಲಾ ಎಂದು ಕುಮಾರ್ ತಂದೆ ಶಿವಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವಸ್ವಾಮಿ, ಇದು ಟಿಕ್‍ಟಾಕ್ ಸ್ಟಂಟ್ ಅಲ್ಲ. ಕುಮಾರ್ ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು ಹೋಗಿ ಹೀಗೆ ಮಾಡಿಕೊಂಡಿದ್ದಾನೆ. ಕುಮಾರ್ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ. ಹಾಗಾಗಿ ಹುಡುಗರಿಗೆ ಡ್ಯಾನ್ಸ್ ಕಲಿಸಿಕೊಡುತ್ತಿದ್ದ. ಮಕ್ಕಳಿಗೆ ಡ್ಯಾನ್ಸ್ ಹೇಳಿಕೊಡಲು ಹೋಗಿ ಹೀಗೆ ಮಾಡಿಕೊಂಡಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಕುಮಾರ್ ರಾಮು ಮೆಲೋಡಿಸ್ ಆರ್ಕೇಸ್ಟ್ರಾದಲ್ಲಿ ಡ್ಯಾನ್ಸರ್ ಕಮ್ ಸಿಂಗರ್ ಆಗಿ ಕಳೆದ ಎಂಟು ವರ್ಷದಿಂದ ಕೆಲಸ ಮಾಡುತ್ತಿದ್ದನು. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಈಗ ಈ ವಿಡಿಯೋ ವೈರಲ್ ಆಗಿದೆ. ಸದ್ಯ ಕುಮಾರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮನೆಯಲ್ಲಿ ಬಡತನ ಇರುವುದರಿಂದ ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
Advertisement
ಆಗಿದ್ದೇನು?
ಕುಮಾರ್ ವಿಡಿಯೋ ಮಾಡುವಾಗ ಸ್ಪೈನಲ್ ಕಾರ್ಡ್ (ಬೆನ್ನು ಮೂಳೆ) ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಕುಮಾರ್ ಸ್ನೇಹಿತನ ಜೊತೆ ಸಾಹಸ ಮಾಡುವಾಗ ಎಡವಟ್ಟು ಮಾಡಿಕೊಂಡಿದ್ದಾನೆ. ಕುಮಾರ್ ಸ್ನೇಹಿತನ ಜೊತೆಯಲ್ಲಿ ವಿಡಿಯೋ ಮಾಡಲು ನಿಂತಿದ್ದನು. ದೂರದಿಂದ ಓಡಿ ಬಂದು ಕುಮಾರ್ ಮುಂದೆ ನಿಂತಿದ್ದ ಸ್ನೇಹಿತನ ಕೈ ಸಪೋರ್ಟ್‍ನಿಂದ ಬ್ಯಾಕ್ ಜಂಪ್ ಮಾಡುತ್ತಾನೆ. ಆಗ ಕುಮಾರ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬಿದ್ದ ಫೋರ್ಸ್ ಗೆ ತಲೆ ಮೂಳೆ ಮತ್ತು ಬೆನ್ನು ಮೂಳೆ ಗಳು ಪುಡಿ ಪುಡಿಯಾಗಿವೆ. ತಕ್ಷಣವೇ ಅವನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ.
Advertisement
https://www.youtube.com/watch?v=NuuQgX-flcQ