Connect with us

Chikkaballapur

ಶಾಸಕ ನೀಡಿದ ಬಾಡೂಟ ಸವಿದ ನಂತ್ರ ಕೆರೆಯಲ್ಲಿ ಮುಳುಗಿ ಯುವಕ ಸಾವು

Published

on

ಚಿಕ್ಕಬಳ್ಳಾಪುರ: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಜೆಕೆ ಕೃಷ್ಣಾರೆಡ್ಡಿ ಅವರು ವಿತರಿಸಿದ ಬಾಡೂಟ ಸೇವಿಸಿದ ನಂತರ ಕನ್ನಂಪಲ್ಲಿ ಕೆರೆಯಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಚಿಂತಾಮಣಿ ನಗರದ ಸುನೀಲ್(25) ಮೃತ ಯುವಕ. ಬಾಡೂಟ ಸವಿದ ನಂತರ ಸ್ನೇಹಿತ ಜಯಸಿಂಹ ಜೊತೆ ಕೆರೆಗೆ ಈಜಲು ಸುನೀಲ್ ಹೋಗಿದ್ದರು. ಕೆರೆಯಲ್ಲಿ ಈಜುತ್ತಿದ್ದಾಗ ನೀರಿನ ಸುಳಿಗೆ ಸಿಲುಕಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ ಮುಳುಗಿ ಜಾಸ್ತಿ ನೀರು ಕುಡಿದ ಪರಿಣಾಮ ಕೆರೆಯಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ಮುಳುಗುತ್ತಿದ್ದ ಜಯಸಿಂಹ ಅವರನ್ನು ಅಲ್ಲಿದ್ದ ಇತರೇ ವ್ಯಕ್ತಿಗಳು ರಕ್ಷಣೆ ಮಾಡಿದ್ದಾರೆ.

ಚಿಂತಾಮಣಿ ತಾಲೂಕು ಕನ್ನಂಪಲ್ಲಿ ಕೆರೆಯಂಗಳದಲ್ಲಿ ನೂರಾರು ಜನ ಬಾಣಸಿಗರು ಸೇರಿ 3 ಸಾವಿರ ಕೆಜಿ ಮಟನ್ ಹಾಗೂ 2 ಸಾವಿರ ಕೆಜಿ ಚಿಕನ್ ನಿಂದ ಬಿರಿಯಾನಿ, ಮಟನ್ ಸಾಂಬರ್ ಹಾಗೂ ಮುದ್ದೆ ಊಟವನ್ನು ತಯಾರಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೇ ಆರಂಭವಾಗಿರುವ ಬಾಡೂಟದಲ್ಲಿ ಸಾವಿರಾರು ಜನರು ಆಗಮಿಸಿ ಊಟ ಸೇವಿಸಿದ್ದರು.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಎದ್ದಿರುವ ಕಾರಣದಿಂದ ಮತದಾರರನ್ನು ಸೆಳೆಯಲು ಶಾಸಕರು ಮೆಗಾ ಪ್ಲಾನ್ ಮಾಡಿ ಭರ್ಜರಿ ಬಾಡೂಟದ ನೆಪದಲ್ಲಿ ಜನರ ಓಲೈಕೆಗೆ ಇಳಿದಿದ್ದಾರೆಂದು ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಕೃಷ್ಣ ರೆಡ್ಡಿ ಕನ್ನಂಪಲ್ಲಿ ಕೆರೆ ತುಂಬಿದ ಕಾರಣ ಹಾಗೂ ಕೆರೆಯಂಗಳದ ಬಳಿ ವನಮಹೋತ್ಸವ ಮಾಡುವ ಕಾರಣ ಬಾಡೂಟ ಏರ್ಪಡಿಸಿದ್ದು ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *