ರಾಯಚೂರು: ಕ್ವಾರಿ ಹೊಂಡದಲ್ಲಿ ಸ್ನಾನ ಮಾಡಲು ಹೋದ ಯುವಕ ಈಜುಬಾರದೆ ಸಾವನ್ನಪಿರುವ ಘಟನೆ ರಾಯಚೂರು (Raichur) ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯ ಯದ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಿಠ್ಠಲ್ (22) ಈಜು ಬಾರದೆ ಮೃತಪಟ್ಟಿದ್ದಾನೆ. ಭಾರತ್ ಮಾಲಾ ಯೋಜನೆಯಡಿ (Bharatmala Yojana) ರಾಷ್ಟ್ರೀಯ ಆರು ಪಥದ ಹೆದ್ದಾರಿ ನಿರ್ಮಾಣಕ್ಕೆ ಮೊರಂಗಾಗಿ ತೋಡಿದ್ದ ಜಾಗದಲ್ಲಿ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದು ಸುಮಾರು 20 ಅಡಿ ಆಳವಿದ್ದು, ಯುವಕ ಈಜು ಬಾರದೆ ಹೊಂಡದಲ್ಲಿ ಸಾವನ್ನಪ್ಪಿದ್ದಾನೆ. ಅವೈಜ್ಞಾನಿಕವಾಗಿ ಕ್ವಾರಿ ತೋಡಿ, ತಡೆಗೋಡೆ ನಿರ್ಮಿಸದೆ ಬಿಟ್ಟಿದ್ದಕ್ಕೆ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಹಿಟ್ ಅಂಡ್ ರನ್ ಕೇಸ್ – ಬೈಕ್ ಸವಾರ ಸ್ಥಳದಲ್ಲೇ ಸಾವು
Advertisement
Advertisement
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಯುವಕ ಸಾವನ್ನಪ್ಪಿದ್ದು, ಮೃತನ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹೆಂಡತಿಯನ್ನು ಬಸ್ಸು ಹತ್ತಿಸಿ ಬೈಕ್‌ನಲ್ಲಿ ಬರುತ್ತೇನೆ ಎಂದ ಪತಿ ಶವವಾಗಿ ಪತ್ತೆ
Advertisement