Bengaluru Rural
ಹೊಸ ವರ್ಷಾಚರಣೆಗೆ ಶಿವಗಂಗೆಗೆ ಬಂದಿದ್ದ ಯುವಕ ನೀರು ಪಾಲು

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಯುವಕ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ನಡೆದಿದೆ.
ಬಿಹಾರ ಮೂಲದ 28 ವರ್ಷ ವಯಸ್ಸಿನ ಸಾಗರ್ ಪತ್ರ ಮೃತ ದುರ್ದೈವಿ. ಇಂದು ಬೆಂಗಳೂರಿನಿಂದ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಸ್ನೇಹಿತರೊಡನೆ ಶಿವಗಂಗೆಗೆ ಬಂದಿದ್ದು, ಕಲ್ಯಾಣಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತನ ಶವಕ್ಕಾಗಿ ಸ್ಥಳೀಯರು ಹಾಗೂ ಡಾಬಸ್‍ಪೇಟೆ ಪೊಲೀಸರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
