ರಾಮನಗರ: ಬೀದಿಯಲ್ಲಿ ಕೂರಿಸಿದ್ದ ಗಣಪನನ್ನು ಕಾಯುತಿದ್ದ ಯುವಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟ ಧಾರೂಣ ಘಟನೆ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ನಡೆದಿದೆ.
ಚೇತನ್ ಕುಮಾರ್ (16) ಮೃತ ದುರ್ದೈವಿ. ಜಾಲಮಂಗಲದಲ್ಲಿ ಬೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಚೇತನ್ ಸೇರಿದಂತೆ ನಾಲ್ಕು ಮಂದಿ ಕಾವಲು ಕಾಯುತ್ತಿದ್ದರು. ಶನಿವಾರವೂ ಸಹ ಕಾವಲು ಕಾಯುತ್ತಿದ್ದಾಗ, ಮೂತ್ರ ವಿಸರ್ಜನೆಗೆಂದು ಚೇತನ್ ತೆರಳಿದ್ದನು. ಈ ವೇಳೆ ಬೀದಿ ಲೈಟ್‍ಗೆ ಅಳವಡಿಸಿದ್ದ ವಿದ್ಯುತ್ ತಂತಿ ತಗಲು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Advertisement
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv