ಜೆಡಿಎಸ್, ಕಾಂಗ್ರೆಸ್ ಮಾರಾಮಾರಿ- ಮುಂದಿನ ವಾರವೇ ಹಸೆಮಣೆ ಏರಬೇಕಾಗಿದ್ದ ಜೆಡಿಎಸ್ ಕಾರ್ಯಕರ್ತ ಬಲಿ

Public TV
1 Min Read
CKB 6

ಚಿಕ್ಕಬಳ್ಳಾಪುರ: ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಿನ ಚುನಾವಣಾ ಹಿಂಸಾಚಾರಕ್ಕೆ ಜೆಡಿಎಸ್ ಕಾರ್ಯಕರ್ತನ ಹೆಣ ಬಿದ್ದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕೋಟಾಲದಿನ್ನೆಯ ಬಾರ್ ಎದುರುಗಡೆ ಗಲಾಟೆ ನಡೆದಿದೆ. ಈ ವೇಳೆ ಹಳೇ ಉಪ್ಪಾರಹಳ್ಳಿಯ ಜೆಡಿಎಸ್ ಕಾರ್ಯಕರ್ತರಾದ ನರೇಂದ್ರ ರೆಡ್ಡಿ, ರಾಮರೆಡ್ಡಿ ಮೇಲೆ ಕಾಂಗ್ರೆಸ್ಸಿಗ ರಮೇಶ್ ಮತ್ತು ತಂಡ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ.

CKB 1 1

ಪರಿಣಾಮ ಗಂಭೀರ ಗಾಯಗೊಂಡ 27 ವರ್ಷದ ರಾಮರೆಡ್ಡಿಯನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರ್ಕೊಂಡು ಬಂದಿದ್ದಾರೆ. ಆದ್ರೆ ರೆಡ್ಡಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇನ್ನು ನರೇಂದ್ರ ರೆಡ್ಡಿ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ಸದ್ಯ ಇವರು ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮರೆಡ್ಡಿಗೆ ಮದುವೆ ಫಿಕ್ಸ್ ಆಗಿದ್ದು, ಮುಂದಿನ ವಾರ ಹಸೆಮಣೆ ಏರಬೇಕಿತ್ತು. ರಮೇಶ್ ಮೇಲೂ ಹಲ್ಲೆ ನಡೆದಿದೆ. ಇದೀಗ ಆರೋಪಿಗಳನ್ನು ಬಂಧಿಸುವಂತೆ ತಾಲೂಕು ಆಸ್ಪತ್ರೆ ಮುಂದೆ ಜೆಡಿಎಸ್ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಪೊಲೀಸ್ ಜೀಪ್ ಮೇಲೆ ಕಲ್ಲು ತೂರಾಟ ಕೂಡ ನಡೆಸಲಾಗಿದೆ.

27 04 18 CKB CONGRESS JDS MARAMARI AV 2

ಎಸ್ ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೇಡಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಮೇಶ್ ನನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದ ಗೌರಿಬಿದನೂರಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Share This Article