ಜೈಪುರ: ವಿವಾಹಿತ ಮಹಿಳೆಯ ಗಂಡನ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಐದನೇ ಮಹಡಿಯಿಂದ ಯುವಕನೊಬ್ಬ ಜಿಗಿದು ಪ್ರಾಣ ಕಳೆದುಕೊಂಡ ಘಟನೆ ಜೈಪುರದಲ್ಲಿ ನಡೆದಿದೆ.
Advertisement
ಮೊಹಿನ್ಸ್(29) ಮೃತ ಯುವಕ. ಮೂಲತಃ ಉತ್ತರಪ್ರದೇಶದವನಾಗಿರುವ ಈತನೊಂದಿಗೆ ಮಹಿಳೆಯು ಎರಡು ವರ್ಷಗಳ ಹಿಂದೆ ಓಡಿ ಹೋಗಿದ್ದು, ಲೀವ್-ಇನ್ ರಿಲೇಶನ್ಶಿಪ್ನಲ್ಲಿದ್ದರು. ಈ ವಿಚಾರ ತಿಳಿದ ಪತಿ ಆಕೆಯನ್ನು ಹುಡುಕಿಕೊಂಡು ಹೋಗುವಾಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ತಂದೆ ಸಾವಿನಿಂದ ಮನನೊಂದು 4 ತಿಂಗಳ ಬಳಿಕ ಮಗಳು ಆತ್ಮಹತ್ಯೆ
Advertisement
Advertisement
ಇತ್ತ ತನ್ನನ್ನು ಹಿಂಬಾಲಿಸಿಕೊಂಡು ಮಹಿಳೆಯ ಪತಿ ಬಂದಿರುವ ವಿಚಾರ ತಿಳಿದ ಮೊಹಿನ್ಸ್ ಗಾಬರಿಗೊಂಡು ಮನೆಯ ಬಾಲ್ಕನಿಯಿಂದ ಜಿಗಿದಿದ್ದಾನೆ. ಬಳಿಕ ಮಹಿಳೆಯು ಅವನನ್ನು ಎಸ್ಎಂಎಸ್ ಆಸ್ಪತ್ರೆಗೆ ಕರೆದೊಯ್ದಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಹೆದ್ದಾರಿಯಲ್ಲೇ ಹೊತ್ತಿ ಉರಿದ 22 ಮಂದಿ ಪ್ರಯಾಣಿಕರಿದ್ದ ಬಸ್!
Advertisement
ಮೃತ ವ್ಯಕ್ತಿ ವಿವಾಹಿತ ಮಹಿಳೆಯೊಂದಿಗೆ ಲೀವ್-ಇನ್ ರಿಲೇಶನ್ಶಿಪ್ನಲ್ಲಿದ್ದರು ಹಾಗೂ ಆಕೆಯ ಪತಿಯನ್ನು ಕಂಡು ಭಯಬೀತನಾದ ಕಾರಣ ಈ ಘಟನೆ ನಡೆದಿದೆ ಎಂದು ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿ ಬಲ್ವೀರ್ ಸಿಂಗ್ ಹೇಳಿದ್ದಾರೆ.