ಬೆಂಗಳೂರು: ಮೋಜಿಗಾಗಿ ಕೆರೆಯಲ್ಲಿ ಈಜಲು ಹೋದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೆ ನಿಜಗಲ್ ಕೆರೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಶ್ರೀನಿವಾಸ್ ಮೃತ ದುರ್ದೈವಿ. ಮೃತ ಶ್ರೀನಿವಾಸ್ ನಂದಿಹಳ್ಳಿ ಬಳಿಯ ರಿಲಯಾನ್ಸ್ ವೇರ್ ಔಸ್‍ನಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿಕೊಂಡು ಮುಂಜಾನೆ ತನ್ನ ಆರು ಮಂದಿ ಸ್ನೇಹಿತರಾದ ರಾಘವೇಂದ್ರ, ಮೋಹನ್ ಕುಮಾರ್, ವಿನಯ್ ಸಿಂಗ್, ಸಂತೋಷ್, ಸುರೇಶ್ ಬಾಬು ಮತ್ತು ತೇಜಸ್ ಎಲ್ಲರೊಂದಿಗೆ ಈಜಲು ತೆರಳಿದ್ದನು.
Advertisement
Advertisement
ಈ ವೇಳೆ ಈಜಿ ಈಜಿ ಸುಸ್ತಾದ ಯುವಕ ನೋಡ ನೋಡುತ್ತಲೆ ಕಣ್ಮರೆಯಾಗಿದ್ದಾನೆ. ಶ್ರೀನಿವಾಸ್ ಕಣ್ಮೆರೆಯಾಗುವ ವಿಡಿಯೋ ಮತ್ತೊಬ್ಬ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ. ಈತನೊಂದಿಗೆ ಇತರ ಸ್ನೇಹಿತರು ಸಹ ಈಜುತ್ತಿದ್ದರು. ಆದರೆ ಯಾರು ಸಹ ಆತನನ್ನು ಉಳಿಸಲಾಗಲಿಲ್ಲ. ಶ್ರೀನಿವಾಸ್ ಮುಳುಗುತ್ತಿರುವಾಗ ದಡದಲ್ಲಿರುವ ಮತ್ತೊಬ್ಬ ಸ್ನೇಹಿತ, ಅವನು ಮುಳುಗುತ್ತಿದ್ದಾನೆ ಜುಟ್ಟು ಹಿಡಿದು ಮೇಲೆತ್ತಿ ಅನ್ನುತ್ತಾನೆ. ಆಗ ಮೇಲೆತ್ತಲಾಗುವುದಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ಸರೆಯಾಗಿದೆ.
Advertisement
ಶ್ರೀನಿವಾಸ್‍ಗೆ ನೀರು ಎಂದರೆ ಭಯ, ಆತನಿಗೆ ಈಜು ಬರುತ್ತಿರಲಿಲ್ಲ ಎಂದು ಮೃತಳ ಚಿಕ್ಕಮ್ಮ ಆರೋಪಿಸಿದ್ದಾರೆ. ಆದರೆ ಆತನಿಗೆ ನೀರಿಗೆ ಇಳಿಯಬೇಡ ಎಂದರು ಸ್ವತಃ ಅವನೇ ಈಜಲು ತೆರಳಿದ್ದ ಎಂದು ಸ್ನೇಹಿತ ಸಂತೋಷ್ ತಿಳಿಸಿದ್ದಾನೆ. ಆದ್ದರಿಂದ ಈ ಘಟನೆಯ ಸುತ್ತ ಹಲವಾರು ಹನುಮಾನಗಳು ಸೃಷ್ಟಿಯಾಗಿದೆ.
Advertisement
ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿ ಮೃತ ಶ್ರೀನಿವಾಸ್ ದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಸದ್ಯಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಸ್ನೇಹಿತರನ್ನು ಡಾಬಸ್ ಪೇಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ತನಿಖೆಗೆ ಮುಂದಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv