ಬೆಂಗಳೂರು: ಒಂದು ಚಡ್ಡಿ ಸುಟ್ಟಿದ್ದಕ್ಕೆ ಅರೆಸ್ಟ್ ಮಾಡ್ತೀರಾ ಅಲ್ವಾ? ಎಲ್ಲಾ ಜಿಲ್ಲೆಗಳಲ್ಲೂ ಚಡ್ಡಿಗಳನ್ನು ಸುಡ್ತೀವಿ. ಎಷ್ಟು ಜನರನ್ನು ಅರೆಸ್ಟ್ ಮಾಡ್ತೀರಾ ನೋಡೋಣ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಆರ್‌ಎಸ್‌ಎಸ್ ಚಡ್ಡಿ ಸುಟ್ಟು ಪ್ರತಿಭಟನೆ ಮಾಡಿದ ಕಾರಣಕ್ಕೆ ಎನ್‍ಎಸ್‍ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಮತ್ತಿತರರ ಬಂಧನ ವಿರೋಧಿಸಿ ಯೂತ್ ಕಾಂಗ್ರೆಸ್ ವತಿಯಿಂದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ನಲಪಾಡ್, ಚಡ್ಡಿಗೆ ಬೆಂಕಿ ಹಾಕಿದ್ದಕ್ಕೆ ಮನೆ ಸುಡಲು ಹೋದ್ರು ಅಂತ ಆರೋಪ ಮಾಡುತ್ತಿದ್ದಾರೆ. ಚಡ್ಡಿಯ ಬೆಂಕಿಯಿಂದ ಮನೆ ಸುಡಕ್ಕಾಗುತ್ತಾ? ಆರ್‌ಎಸ್‌ಎಸ್ ದೇಶವನ್ನು ಸುಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ
ಮೊದಲು ಹಿಜಬ್ ಎಂದು ಬಿಜೆಪಿಯವರು ಮುಸ್ಲಿಮರನ್ನು ಒಡೆದರು. ನಂತರ ಕ್ರೈಸ್ತರು, ದಲಿತರನ್ನು ಒಡೆದರು. ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರುವನ್ನೂ ಕೂಡ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಿಟ್ಟಿಲ್ಲ. ಆರ್‌ಎಸ್‌ಎಸ್‌ನವರು ಸಂವಿಧಾನದ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನವರಿಗೆ ಎಲ್ಲರೂ ಒಂದಾಗಿ ಇರೋಣ ಎಂಬ ಮನಸ್ಥಿತಿ ಇಲ್ಲ. ಆರ್‌ಎಸ್‌ಎಸ್‌ಸ್‍ನವರು ನಮ್ಮ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ. ನನ್ನ ಮಿತ್ರ ಒಂದೇ ಒಂದು ಚಡ್ಡಿಗೆ ಬೆಂಕಿ ಇಟ್ಟಿದ್ದಕ್ಕೆ ಮನೆಗೆ ಬೆಂಕಿ ಇಟ್ಟ ಎಂದು ಬಂಧಿಸುತ್ತಾರೆ. ಆ ಚಡ್ಡಿಯ ಪವರ್ ಈ ದೇಶವನ್ನು ಒಡೆಯುವ ಪವರ್. ಚಡ್ಡಿಗೆ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಸಾಮರ್ಥ್ಯ ಇಲ್ಲ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಶಕ್ತಿ ಇರುವುದು ಕಾಂಗ್ರೆಸ್‍ಗೆ ಮಾತ್ರ. ಈ ಸಮಾಜವನ್ನು ಒಡೆಯುವ ಸರ್ಕಾರ ಇದೆ ಇದನ್ನು ಕಿತ್ತೊಗೆಯುವುದು ನಮ್ಮ ಮುಂದಿರುವ ಮೊದಲ ಗುರಿ ಎಂದು ಕರೆ ನೀಡಿದರು. ಇದನ್ನೂ ಓದಿ: ಮದರಸಾ ತೆರವು ಮಾಡದೆ ಇದ್ದರೆ ನಾವೇ ಅವರ ಕೊರಳಪಟ್ಟಿ ಹಿಡಿದು ಹೊರ ಹಾಕ್ತಿವಿ: ಹಿಂದೂ ಸಂಘಟನೆಗಳು
ನಾವು ಇಲ್ಲಿಂದ ಗೃಹ ಸಚಿವರ ಮನೆಗೆ ಹೋಗಿ ಮುತ್ತಿಗೆ ಹಾಕ್ತೇವೆ. ಪೊಲೀಸರು ಬಂಧಿಸಬಹುದು, ಬಂಧಿಸಲಿ ಎಷ್ಟು ಜನ ನಲಪಾಡ್, ಶ್ರೀನಿವಾಸರನ್ನು ಬಂಧಿಸ್ತಾರೆ, ಬಂಧಿಸಲಿ. ಇನ್ನಷ್ಟು ಜನ ನಲಪಾಡ್, ಶ್ರೀನಿವಾಸ್ ಹುಟ್ಟಿ ಬರುತ್ತಾರೆ. ಇದು ರಾಹುಲ್ ಗಾಂಧಿ ಕಂಡಂತಹ ಯುವ ಕಾಂಗ್ರೆಸ್ ಎಂದರು.