ಬೆಂಗಳೂರು: ರಾಹುಲ್ ಗಾಂಧಿ ಇಡಿ ಸಮನ್ಸ್ ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಬೆಂಕಿ ಹಚ್ಚಿ ಬಂಧನಕ್ಕೊಳಗಾಗಿದ್ದರು. ಇದೀಗ ಕಾರಿಗೆ ಬೆಂಕಿ ಹಾಕಿದ್ದ ಪ್ರಕರಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸುತ್ತ ಗಿರ್ಕಿ ಹೊಡೆಯುತ್ತಿದೆ.
ಇದೀಗ ನಲಪಾಡ್‍ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಕಳೆದ ಜುಲೈ 21 ರಂದು ಕಾಂಗ್ರೆಸ್ ಪ್ರತಿಭಟನೆ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶಾಂತಿ ನಗರದ ಇಡಿ ಕಚೇರಿ ಮುಂದೆ ಕಾರಿಗೆ ಬೆಂಕಿ ಹಾಕಿ ಬಂಧನಕ್ಕೊಳಗಾಗಿದ್ದರು. ಕಾರ್ಯಕರ್ತರ ತನಿಖೆ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷನ ಕಡೆ ಬೆರಳು ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಹಾಗಾಗಿ ಪೊಲೀಸರು ನಲಪಾಡ್ ಪಾತ್ರದ ಬಗ್ಗೆ ಒಂದಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡಲಾಗುತ್ತಿದ್ದು, ಸಾಕ್ಷ್ಯಗಳು ಪಕ್ಕಾ ಆದರೆ ನಲಪಾಡ್‌ಗೆ ನೋಟಿಸ್ ನೀಡಲು ತಯಾರಿ ನಡೆಯುತ್ತಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕಾರಿಗೆ ಬೆಂಕಿ ಇಟ್ಟ ಹೊಣೆ ನಾಯಕನಾಗಿ ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್
ಸದ್ಯ ಬಂಧಿತ ಕಾರ್ಯಕರ್ತರನ್ನು ವಿಚಾರಣೆ ಮಾಡಿರುವ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳು ಹೇಳಿರುವ ಮಾಹಿತಿಯ ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳು ಪತ್ತೆ ಆದರೆ ನಲಪಾಡ್‍ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನನ್ನ ಮಗ ಕಾಂಗ್ರೆಸ್ ಸೇರ್ಪಡೆ ಆಗ್ತಿರೋದು ನಿಜ: ಬಿಜೆಪಿ MLC ವಿಶ್ವನಾಥ್