ಬೆಂಗಳೂರು: ಅಗ್ನಿಪಥ್ ಯೋಜನೆ ವಿರುದ್ಧ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ನಲಪಾಡ್ ಹ್ಯಾರೀಸ್ ಕಿಡಿಕಾರಿದ್ದಾರೆ.
ಅಗ್ನಿಪಥ್ ಯೋಜನೆ ವಿರೋಧಿಸಿ ಇಂದು ರಾಜ್ಯ ಯುವ ಕಾಂಗ್ರೆಸ್ ನಿಂದ ರಾಜಭವನ ಚಲೋ ನಡೆಯುತ್ತಿದೆ. ಈ ವೇಳೆ ಮಾತನಾಡಿದ ನಲಪಾಡ್, ಅಗ್ನಿಪಥ್ ಯೋಜನೆ ತಂದಿದ್ದೀರಿ. ಯುವಕರು ಸೈನಿಕನಾಗಬೇಕೆಂಬ ಕನಸು ಕಾಣುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಕನಸು ಕಾಣುತ್ತಿದ್ದಾರೆ. ಸೇನೆಯಲ್ಲಿ ಸೇರೋಕೆ ವರ್ಷಗಟ್ಟಲೆ ಆಸೆ ಇಟ್ಕೊಂಡಿದ್ದಾರೆ. ಆದರೆ ಇದೀಗ ಯೋಜನೆ ಮೂಲಕ ಅವರ ಕನಸಿಗೆ ನೀವು ಹೊಡೆದಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ನಾಲ್ಕು ವರ್ಷಕ್ಕೆ ಅವರ ಆಸೆಯನ್ನ ಹತ್ತಿಕ್ಕಿದ್ದೀರಿ. ಮುಂದೆ ನಮ್ಮ ಜೀವನ ಹೇಗೆ ಅಂತ ಗಡಿಯಲ್ಲಿರುವಾಗಲೇ ಅವನು ಚಿಂತೆಗೆ ಬೀಳಬೇಕು. 17 ವರ್ಷಕ್ಕೇ ಕೆಲಸಕ್ಕೆ ಸೇರೋದು ಹೇಗೆ ಎಂದು ಪ್ರಶ್ನಿಸಿದ ನಲಪಾಡ್, ಐಐಎಂನಲ್ಲಿ ಓದಿದವರಿಗೆ ಕೆಲಸ ಇಲ್ಲ ಎಂದರು. ಇದನ್ನೂ ಓದಿ: ನನಗೆ ಮಾಟ ಮಾಡಿಸಿದವ್ರಿಗೆ ಶಿಕ್ಷೆ ಕೊಟ್ರೆ 50,001 ರೂ. ಕಾಣಿಕೆ ಹಾಕ್ತೀನಿ- ಸವದತ್ತಿ ಯಲ್ಲಮ್ಮನಿಗೆ ಬಂತು ಪತ್ರ
Advertisement
Advertisement
ಕೋವಿಡ್ ನಲ್ಲಿ ಕೋಟಿ ಜನ ಕೆಲಸ ಕಳೆದುಕೊಂಡರು. ಹಾಗಾಗಿ ಅಗ್ನಿಪಥ್ ವಾಪಸ್ ಪಡೆಯಬೇಕು. ಪಡೆಯುವವರೆಗೆ ಹೋರಾಟ ನಡೆಯಲಿದೆ. ರಾಜಭವನ್ ಚಲೋ ಇಟ್ಕೊಂಡಿದ್ದೇವೆಪೊಲೀಸರು ನಮ್ಮನ್ನ ತಡೆಯೋಕೆ ಆಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Live Tv