ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣಾ (Youth Congress Election) ಫಲಿತಾಂಶ ಪ್ರಕಟವಾಗಿದ್ದು ಅಧ್ಯಕ್ಷರಾಗಿ ಮಂಜುನಾಥ್ ಹೆಚ್ಎಸ್ (Manjunath HS) ಆಯ್ಕೆಯಾಗಿದ್ದಾರೆ.
ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಮತ್ತು ದೀಪಿಕಾ ರೆಡ್ಡಿ ನಡುವೆ ಪೈಪೋಟಿ ನಡೆದಿತ್ತು. 2,71,638 ಮತಗಳಿಂದ ಜಯಗಳಿಸುವ ಮೂಲಕ ಮಂಜುನಾಥ್ ಅಧ್ಯಕ್ಷ ಪಟ್ಟ ಅಲಂಕರಿಸಿದ್ದಾರೆ. ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ನೋಡನೋಡುತ್ತಿದ್ದಂತೆ ಮುಳುಗಿದ ಬೋಟ್ – 6 ಮೀನುಗಾರರ ರಕ್ಷಣೆ
Advertisement
ಮಂಜುನಾಥ್ ಅವರು 5,67,343 ಮತಗಳನ್ನು ಪಡೆದರೆ ದೀಪಿಕಾ ರೆಡ್ಡಿ ಅವರು 2,95,705 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿಗರಾಗಿದ್ದಾರೆ.
Advertisement