ಬೆಂಗಳೂರು: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಫೋಟೋಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಚಪ್ಪಲಿ ಏಟು ನಿಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ದಾವಣಗೆರೆಯಲ್ಲಿ ಮಂಗಳವಾರ ನಡೆದಿದ್ದ ಪೌರತ್ವ ಕಾಯ್ದೆ(ಸಿಎಎ) ಬೆಂಬಲ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ರೇಣುಕಾಚಾರ್ಯ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕ್ರಮಕ್ಕೆ ಒತ್ತಾಯಿಸಿದರು. ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಮುಂದೆ ಕಾರ್ಯಕರ್ತರು ರೇಣುಕಾಚಾರ್ಯ ಫೋಟೋಗೆ ಚಪ್ಪಲಿಯಲ್ಲಿ ಹೊಡೆಯೋ ಮೂಲಕ ಹೇಳಿಕೆಗಳಿಗೆ ಖಂಡನೆ ವ್ಯಕ್ತಪಡಿಸಿದರು.
Advertisement
Advertisement
ನಿನ್ನೆ ದಾವಣಗೆರೆಯಲ್ಲಿ ಸಿಎಎ, ಎನ್ ಆರ್ ಸಿ ಅಭಿಯಾಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ, ಶಾಸಕ ರೇಣುಕಾಚಾರ್ಯ, ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸಲಾಗುತ್ತದೆ. ಮುಸ್ಲಿಮರು ದೇಶದ್ರೋಹಿಗಳು ಅನ್ನೋ ಹೇಳಿಕೆ ನೀಡಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು.
Advertisement
ಮುಸ್ಲಿಂ ಸಮುದಾಯವನ್ನ ಕೆರಳಿಸುವ ಹೇಳಿಕೆಗಳನ್ನ ಬಿಜೆಪಿಯ ಸಿಟಿ ರವಿ, ರೇಣುಕಾಚಾರ್ಯ ಹಾಗೂ ಕಲ್ಕಡ್ಕ ಪ್ರಭಾಕರ್ ಭಟ್ ಸೇರಿ ಹಲವರು ನೀಡುತ್ತಿದ್ದಾರೆ. ಸಿಎಎ ವಿಷಯದಲ್ಲಿ ಕಾನೂನುಬದ್ಧ ಸುವ್ಯವಸ್ಥೆಗೆ ಧಕ್ಕೆ ತರೋ ಹೇಳಿಕೆ ನೀಡುತ್ತಿದ್ದಾರೆ. ರೇಣುಕಾಚಾರ್ಯ, ಸಿಟಿ ರವಿ, ಕಲ್ಲಡ್ಕ ಪ್ರಭಾಕರ್ ಭಟ್ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಂದ ಕೋಮುಗಲಭೆ, ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಇವರ ವಿರುದ್ಧ ದೂರು ನೀಡಿದ್ರೂ ಇವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೂಡಲೇ ಇವರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Advertisement
ಜೊತೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಮುಸ್ಲಿಂ ಮಸೀದಿಗಳಲ್ಲಿ ಶಸ್ತಾಸ್ತ್ರಗಳನ್ನು ಇಟ್ಟುಕೊಳ್ಳಲಾಗಿದೆ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿ ಮುಸ್ಲಿಂ ಜನಾಂಗವನ್ನು ನಿಂದಿಸಿರುವುದರ ವಿರುದ್ಧ ದೂರು ನೀಡಿದರು.