ಬಳ್ಳಾರಿ: ಮದುವೆಯಾಗಲು ಹೆಣ್ಣು ಸಿಗದೇ ಇದ್ದುದರಿಂದ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಆರೀಫ್ ಅಷರಫಿ(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರೀಫ್ ಬಳ್ಳಾರಿಯ ಸಿರಗುಪ್ಪ ನಿವಾಸಿಯಾಗಿದ್ದು, ಮದುವೆ ಮಾಡಿಕೊಳ್ಳಲು ಹೆಣ್ಣು ಹುಡುಕುತ್ತಿದ್ದನು. ಆದರೆ ಆರೀಫ್‍ಗೆ ಇದುವರೆಗೂ ಯಾವುದೇ ಹೆಣ್ಣು ಸಿಗಲಿಲ್ಲ. ಹೀಗಾಗಿ ಆರೀಫ್ ತೀವ್ರವಾಗಿ ಮನನೊಂದಿದ್ದನು.
ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳನ್ನು ಬೇಗ ಮದುವೆ ಮಾಡುತ್ತಾರೆ. ಹೀಗಿದ್ದರೂ ಸಹ ನನಗೆ ಮದುವೆಯಾಗಿಲ್ಲ. ನನ್ನ ಸ್ನೇಹಿತರೆಲ್ಲರಿಗೂ ಮದುವೆಯಾಗಿದೆ. ನನಗೆ ಇನ್ನೂ ಮದುವೆಯಾಗಿಲ್ಲ ಎಂದು ಆರೀಫ್ ಬೇಸರಗೊಂಡಿದ್ದನು. ಇದೇ ವಿಚಾರವಾಗಿ ಆರೀಫ್ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆರೀಫ್ ಮೃತದೇಹ ಸಿರಗುಪ್ಪ ತಾಲೂಕಿನ ಕೆಚ್ಚನಗುಡ್ಡದ ನದಿಯಲ್ಲಿ ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv