ಬೆಂಗಳೂರು: ನಾನು ಸಾಯುತ್ತೇನೆ ಎಂದು ಪ್ರೇಯಸಿಗೆ ಹೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ.
ಕೆವಿನ್ ಫೆಡರಿಕ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆವಿನ್ ಫೆಡರಿಕ್ ಖಾಸಗಿ ಕಾಲೇಜ್ ನಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕೆವಿನ್ ತನ್ನ ಮೊಬೈಲ್ ನಲ್ಲಿ ಯುವತಿ ಜೊತೆ ಚಾಟ್ ಮಾಡುತ್ತಿದ್ದ. ಈ ವೇಳೆ ಕೆವಿನ್ ತನ್ನ ಪ್ರೇಯಸಿಯೊಂದಿಗೆ ಚಾಟ್ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೇಸೆಜ್ ಮಾಡಿದ್ದಾನೆ. ನಂತರ ತನ್ನ ಪ್ರೇಯಸಿಯ ಪ್ರತಿಕ್ರಿಯೆ ನೋಡಿ ಕೆವಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೆವಿನ್ ನಾನು ಸಾಯುತ್ತೇನೆ ಎಂದಾಗ ಯುವತಿ ‘ಐ ಡೋಂಟ್ ಮೈಂಡ್’ ಎಂದು ಮೇಸಜ್‍ಗೆ ರಿಪ್ಲೇ ಮಾಡಿದ್ದಾಳೆ. ಇದ್ದರಿಂದ ಮನನೊಂದು ಕೆವಿನ್ ತನ್ನ ಪ್ರೇಯಸಿಗೆ ತಾನು ಸಾಯುವ ಮುನ್ನ ಹಗ್ಗವನ್ನು ಫ್ಯಾನ್ ಗೆ ಕಟ್ಟಿರುವ ಫೋಟೋವನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆವಿನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.