ಭೋಪಾಲ್: ಯುವಕನೊಬ್ಬ ಸಿಎಂ ಮನೆಯ ಹತ್ತಿರ ಹೈ ವೊಲ್ಟೇಜ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ಆತನನ್ನು ರಕ್ಷಿಸಲು ಹೋದ ರಕ್ಷಣಾ ಸಿಬ್ಬಂದಿ ಆತನ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ವಿರೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕಳೆದ 5 ವರ್ಷದಿಂದ ಜಮೀನಿನ ವಿಷಯಕ್ಕಾಗಿ ವಿರೇಂದ್ರ ಸರ್ಕಾರಿ ಕಚೇರಿಗಳಿಗೆ ತಿರುಗಾಡುತ್ತಿದ್ದನು. ಈ ಕೆಲಸದಿಂದ ಬೇಸತ್ತು ವಿರೇಂದ್ರ ಗುರುವಾರ ಆತ್ಮಹತ್ಯಗೆ ಯತ್ನಿಸಲು ಸಿಎಂ ಮನೆ ಹತ್ತಿರದ ಹೈವೊಲ್ಟೇಜ್ ವಿದ್ಯುತ್ ಕಂಬವನ್ನು ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿರೇಂದ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ರಕ್ಷಣಾ ಸಿಬ್ಬಂದಿ ಆತನನ್ನು ರಕ್ಷಿಸಲು ಮುಂದಾದರು. ಈ ವೇಳೆ ವಿರೇಂದ್ರನನ್ನು ರಕ್ಷಿಸುವ ಮೊದಲು ಆತನ ಜೊತೆ ಸೆಲ್ಫಿ ತೆಗೆದುಕೊಂಡು ನಂತರ ಆತನನ್ನು ರಕ್ಷಿಸಿದ್ದಾರೆ.
ಸದ್ಯ ರಕ್ಷಣಾ ಸಿಬ್ಬಂದಿ ಯುವಕನ ಜೊತೆ ಸೆಲ್ಫೀ ತೆಗೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv