ಬೆಂಗಳೂರು: ಪುಂಡರ ವೀಲ್ಹಿಂಗ್ ಕ್ರೇಜ್‍ಗೆ ರಸ್ತೆಯಲ್ಲಿ ತಮ್ಮ ಪಾಡಿಗೆ ನಡದುಕೊಂಡು ಹೋಗುತ್ತಿದ್ದ ಮಹಿಳೆ ಆಸ್ಪತ್ರೆಗೆ ಸೇರಿರುವ ಘಟನೆ ಬೆಂಗಳೂರಿನ ಗೌರಿಪಾಳ್ಯದ ನರಸಿಂಹಸ್ವಾಮಿ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಬುಧವಾರ ತಮ್ಮ ಪಾಡಿಗೆ ತಾವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಬೈಕ್ ಸವಾರರಿಬ್ಬರು ವೀಲ್ಹಿಂಗ್ ಮಾಡುತ್ತ ಕಂಟ್ರೋಲ್ ಸಿಗದೇ ಗುದ್ದಿದ್ದಾರೆ.
ಮಹಿಳೆಯ ಮೇಲೆ ಬೈಕ್ ಬಿದ್ದ ಪರಿಣಾಮವಾಗಿ ತಲೆ ಮತ್ತಿತರ ಭಾಗಗಳಿಗೆ ಪೆಟ್ಟು ಬಿದಿದ್ದೆ. ಸ್ಥಳೀಯರು ಸೇರುತ್ತಿದ್ದಂತೆ ಸ್ಥಳದಿಂದ ಬೈಕ್ ಸಮೇತ ವೀಲ್ಹಿಂಗ್ ಮಾಡಿದ ಯುವಕರು ಪರಾರಿಯಾಗಿದ್ದಾರೆ. ಇನ್ನೂ ಸ್ಥಳೀಯರು ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಮಹಿಳೆ ಪ್ರಾಣಾಪಾಯದಿಂದ ಪಾರಗಿದ್ದಾರೆ. ಇದನ್ನೂ ಓದಿ: ಪುಸ್ತಕದಿಂದ ತೆಗೆದರೂ ಭಾರತೀಯರ ಹೃದಯದಲ್ಲಿ ಟಿಪ್ಪು ಸದಾ ನೆಲೆಸಿರುತ್ತಾರೆ: ಹೆಚ್.ವಿಶ್ವನಾಥ್
ಈ ಎಲ್ಲಾ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು ಮಹಿಳೆ ಪರವಾಗಿ ಸ್ಥಳೀಯರು ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಹೇಳಿಕೆಯಿಂದ ಭಾರತದ ಏಕತೆಗೆ ಧಕ್ಕೆ: ಸ್ಟಾಲಿನ್