ಲಕ್ನೋ: ಸೊಸೆಯ ಮೇಲೆ ಮಾವನೇ (Father In Law) ಅತ್ಯಾಚಾರ ಎಸಗುತ್ತಾನೆ. ಈ ವಿಚಾರ ತಿಳಿದ ಪತಿ, ನೀನು ನನಗೆ ಪತ್ನಿ ಅಲ್ಲ, ಅಮ್ಮ ಎಂದು ಹೇಳಿ ಆಕೆಯನ್ನು ಮನೆಯಿಂದ ಹೊರಗಡೆ ಹಾಕಿದ ಪ್ರಸಂಗವೊಂದು ಉತ್ತರಪ್ರದೇಶದಲ್ಲಿ (UttarPradesh) ನಡೆದಿದೆ.
ಈ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. 26 ವರ್ಷದ ತನ್ನ ಪತ್ನಿಯನ್ನು ಹೊರಗೆ ಹಾಕುವ ವೇಳೆ, ನನ್ನ ತಂದೆ ನಿನ್ನೊಂದಿಗೆ ಬಲವಂತವಾಗಿ ಸಂಬಂಧವನ್ನು ಹೊಂದಿದ್ದರಿಂದ ನೀನು ನನ್ನ ತಂದೆಯ ಪತ್ನಿಯಾಗಿರುತ್ತಿ ಮತ್ತು ನನ್ನ ‘ಅಮ್ಮಿ’ (ತಾಯಿ) ಆಗಿರುವುದರಿಂದ ನಿನ್ನನ್ನು ನನ್ನೊಂದಿಗೆ ಇರಲು ಬಿಡುವುದಿಲ್ಲ ಎಂದು ಹೇಳಿದ್ದಾನೆ.
ಈ ಸಂಬಂಧ ಮಹಿಳೆ ಸೆಪ್ಟೆಂಬರ್ 7 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತನಗೆ ಕಳೆದ ವರ್ಷ ಮದುವೆಯಾಗಿದೆ. ಆದರೆ ಆಗಸ್ಟ್ 5ರಂದು ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮಾವ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹೆಂಡ್ತಿ ಕಾಟ- ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿ Metro ಎಂಜಿನಿಯರ್ ಸೂಸೈಡ್
ಅತ್ತೆಯನ್ನು ನನ್ನ ಪತಿ ಔಷಧಿಗೆಂದು ಹೊರಗಡೆ ಕರೆದುಕೊಂಡು ಹೋಗಿದ್ದರು. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಮಾವ ನನ್ನ ಮೇಲೆ ರೇಪ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿ, ನನಗೆ ಥಳಿಸಿದ್ದಾರೆ. ಇನ್ನು ಈ ವಿಚಾರವನ್ನು ಪತಿ ಬಳಿ ವಿವರಿಸಿದೆ. ಆದರೆ ಅವರು ಸಿಟ್ಟಿಗೆದ್ದು, ನೀನು ನನಗೆ ಅಮ್ಮನಾಗುತ್ತೀಯಾ.. ಪತ್ನಿ ಅಲ್ಲ ಎಂದು ಹೇಳಿ ಮನೆಯಿಂದ ಹೊರಗಡೆ ಹಾಕಿದ್ದಾರೆ. ಸದ್ಯ ಪೋಷಕರ ಜೊತೆ ವಾಸವಾಗಿರುವುದಾಗಿ ಮಹಿಳೆ ತಿಳಿಸಿದ್ದಾಳೆ.
ಮಹಿಳೆ ಈಗಾಗಲೇ 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಆದರೆ ಈ ವಿಚಾರವನ್ನು ಆಕೆ ದೂರಿನಲ್ಲಿ ತಿಳಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಮಹಿಳೆಯ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 376 (ಲೈಂಗಿಕ ದೌರ್ಜನ್ಯ), 323 (ಉದ್ದೇಶಪೂರ್ವಕವಾಗಿ ಘಾಸಿ) ಮತ್ತು 506 (ಬೆದರಿಕೆ) ಅಡಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇತ್ತ ಸೊಸೆ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿರುವ ಮಾವ, ಹಣದ ಲಾಭಕ್ಕಾಗಿ ಅವರು ತಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]